Ad Widget

ಪಡ್ಪಿನಂಗಡಿ : ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ


ಕಲ್ಮಡ್ಕ ಮತ್ತು ಪಂಬೆತ್ತಾಡಿ ಸ್ತ್ರೀಶಕ್ತಿ ಗುಂಪುಗಳ ಗೊಂಚಲು ಸಮಿತಿ ಮತ್ತು ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ನಿವೃತ್ತರಿಗೆ ಸನ್ಮಾನ, ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮ ಪಡ್ಪಿನಂಗಡಿಯ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀಶಕ್ತಿ ಗುಂಪುಗಳ ಗೊಂಚಲು ಸಮಿತಿ ಅಧ್ಯಕ್ಷೆ ಸುಜನಿ ಪಟ್ಟಾಜೆ ವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮೇರಿ ದೀಪ ಬೆಳಗಿಸಿ ಉದ್ಘಾಟನೆಗೈದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ನಾಗೇಶ್, ಪಂಬೆತ್ತಾಡಿ ಅಂಗನವಾಡಿ ಕಾರ್ಯಕರ್ತೆ ಸುಶೀಲಾ, ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರವಿಶ್ರೀ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಭವ್ಯ ನಾಗರಾಜ್ ಹಾಗೂ ಲೀಲಾ ಮಾಧವ ಜಾಕೆ ಉಪಸ್ಥಿತರಿದ್ದರು.

. . . . .


ಕಾರ್ಯಕ್ರಮದಲ್ಲಿ ಸರಸ್ವತಿ ನಾಗೇಶ ರವರನ್ನು ನಿವೃತ್ತ ಮುಖ್ಯಶಿಕ್ಷಕಿ ಕಮಲ ನಡ್ಕ ಸನ್ಮಾನಿಸಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸುಶೀಲಾ ರವರನ್ನು ಶ್ರೀಮತಿ ಲೀಲಾ ಮಾಧವ ಜಾಕೆ ಸನ್ಮಾನಿಸಿದರು. ಪ್ರಕೃತಿ ಯುವತಿ ಮಂಡಲದ ಗೌರವ ಸಲಹೆಗಾರರಾಗಿರುವ ಸರಸ್ವತಿ ನಾಗೇಶ ರವರನ್ನು ಯುವತಿ ಮಂಡಲದ ಅಧ್ಯಕ್ಷೆ ಸವಿತಾ ಅಲೆಂಗಾರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭವ್ಯ ನಾಗರಾಜ್ ‘ಮಹಿಳಾ ಸಬಲೀಕರಣ’ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕಿರಿಯ ಆರೋಗ್ಯ ಸಹಾಯಕಿ ರೇಣುಕಾ ರವರು ಆರೋಗ್ಯ ಮಾಹಿತಿ ಮತ್ತು ವಿಶ್ವ ಕೈ ತೊಳೆಯುವ ಸಪ್ತಾಹದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುಳ್ಯ ಜ್ಞಾನಜ್ಯೋತಿ ಸಂಯೋಜಕಿ ಸುಜಾತಾ ರವರು ಗುಂಪಿನ ಸದಸ್ಯರಿಗೆ ಬ್ಯಾಂಕ್ ವ್ಯವಹಾರ ಮತ್ತು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಲ್ಮಡ್ಕ ಮತ್ತು ಪಂಬೆತ್ತಾಡಿ ಗ್ರಾಮಗಳ 4 ಆಶಾ ಕಾರ್ಯಕರ್ತೆಯರಿಗೆ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಪ್ರಾಂತೀಯ ಸಲಹೆಗಾರರಾಗಿರುವ ಜಾಕೆ ಮಾಧವ ಗೌಡ ರವರು ಗೌರವಿಸಿ, ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. ಈ ಸಲದ ಎಸ್.ಎಸ್. ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಗೊಂಚಲು ಸಮಿತಿ ವತಿಯಿಂದ ಈ ವೇಳೆ ಧನಸಹಾಯ ನೀಡಲಾಯಿತು. ಕಲ್ಮಡ್ಕ ಅಂಗನವಾಡಿ ಕಾರ್ಯಕರ್ತೆ ನಳಿನಿ ರೈ, ಪಂಬೆತ್ತಾಡಿ ಅಂಗನವಾಡಿ ಕಾರ್ಯಕರ್ತೆ ನಳಿನಿ, ಪಡ್ಪಿನಂಗಡಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ, ಪಂಜ ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಮುರುಳ್ಯ ಶಾಂತಿನಗರ ಅಂಗನವಾಡಿ ಕಾರ್ಯಕರ್ತೆ ಮೀರಾ, ಮುರುಳ್ಯ ಅಲೆಕ್ಕಾಡಿ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ, ಕರಿಕ್ಕಳ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು, ಸದಸ್ಯರಾದ ಬಾಲಕೃಷ್ಣ ಗೌಡ ಮೂಲೆಮನೆ, ಮೋಹನ್ ಎಣ್ಮೂರು, ಪುರಂದರ ಪನ್ಯಾಡಿ, ಪುರುಷೋತ್ತಮ ದಂಬೆಕೋಡಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಿಕಾ ಕಲ್ಮಡ್ಕ ಪ್ರಾರ್ಥಿಸಿದರು. ಮಮತಾ ನಡ್ಕ, ಲೀಲಾವತಿ ಖಂಡಿಗೆ, ಕುಸುಮಾಧರ ಕೆಮ್ಮೂರು ಸನ್ಮಾನಿತರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯಗೈದರು. ರವಿಶ್ರೀ ಪ್ರಾಸ್ತಾವನೆಗೈದು, ಕಮಲ ನಡ್ಕ ನಿರೂಪಿಸಿ, ಸುರೇಶ್ ಕುಮಾರ್ ನಡ್ಕ ವಂದಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!