ಕಳೆದ ಒಂದೇ ವಾರದಲ್ಲಿ ಸುಳ್ಯ ನಗರದಲ್ಲಿ ಕಳ್ಳತನದ ಮೂರು ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಸುಳ್ಯ ಜೂನಿಯರ್ ಕಾಲೇಜು ರಸ್ತೆ ಬಳಿ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ವ್ಯಾಪಾರ ಕೇಂದ್ರಗಳಿಗೆ ನುಗ್ಗಿದ ಕಳ್ಳ ನಗದು ಮತ್ತು ಇತರ ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದು ಪ್ರಕರಣ ಪೊಲೀಸ್ ಠಾಣೆಯಲ್ಲಿ ಇರುವಾಗಲೇ ಅಕ್ಟೋಬರ್ 17ರಂದು ಬೆಳಗಿನ ಜಾವ 3ಗಂಟೆಗೆ ಗಾಂಧಿನಗರದ ಅಲ್ಫಾಹಮ್ ರೆಸ್ಟೋರೆಂಟಿನ ಶಟರ್ ಮುರಿದು ಒಳನುಗ್ಗಿರುವ ಕಳ್ಳ ಸುಮಾರು ಹದಿನೈದು ಸಾವಿರ ರೂಪಾಯಿ ಮತ್ತು ಕ್ಯಾಶ್ ಕೌಂಟರ್ ಮೇಲೆ ಇರಿಸಿದ್ದ ಮಸೀದಿಗಳ ಹರಿಕೆ ಡಬ್ಬಿಯನ್ನು ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.