

ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್ ಮಿಲಾದ್ ಆಚರಣೆ ಅಂಗವಾಗಿ ಪೈಚಾರ್ ಈದ್ ಮಿಲಾದ್ ಸಮಿತಿ ರಚನೆ ಅ. 16. ರಂದು ಪೈಚಾರ್ ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ. ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಿಲಾದ್ ಸಮಿತಿ ಪೈಚಾರ್ ಅಧ್ಯಕ್ಷರಾದ ಆಶ್ರಫ್ ಪೈಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಪಿ ಉಪಸ್ಥಿತರಿದ್ದರು. ಕೊರೋನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿಯ ಮಿಲಾದ್ ಆಚರಣೆ ಸರಳವಾಗಿ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಿಲಾದ್ ಸಮಿತಿ ಪೈಚಾರ್ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಶ್ರಫ್ ಪೈಚಾರ್, ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕೆಪಿ, ಜೊತೆ ಕಾರ್ಯದರ್ಶಿಯಾಗಿ ಮುಜೀಬ್ ಪೈಚಾರ್, ಮೊದಲಾದವರನ್ನು ಅಯ್ಕೆ ಮಾಡಲಾಯಿತು. ಸಭೆಯಲ್ಲಿ ಸ್ಥಳೀಯ ಎಲ್ಲಾ ಸದಸ್ಯರುಗಳು ಭಾಗವಹಿಸಿದರು. ಮುಜೀಬ್ ಪೈಚಾರ್ ಸ್ವಾಗತಿಸಿ ವಂದಿಸಿದರು.