Ad Widget

ಕಳಂಜ ಗ್ರಾಮ ಪಂಚಾಯತಿನಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ

ಕಳಂಜ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಅ. 15ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಲಕ್ಷ್ಮೀಶ ಕಜೆಮೂಲೆ, ಗಾ.ಪಂ.ಸಿಬ್ಬಂದಿಗಳಾದ ತಿರುಮಲೇಶ್ವರ ಮುಂಡುಗಾರು, ಗಿರಿಧರ ಕಳಂಜ ಹಾಗೂ ಗ್ರಂಥಪಾಲಕಿ ಶ್ರೀಮತಿ ಪುಷ್ಪಾವತಿ ಉಪಸ್ಥಿತರಿದ್ದರು.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಪ್ರೌಢಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಎನ್.ಪಿ.ಇ.ಪಿ. ರಾಷ್ಟ್ರೀಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ನಂದನ್.ವೈ.ಬಿ, ಪವನ್ ಕುಮಾರ್.ಎನ್, ಅಶ್ವಿತ್.ಎ, ಸಿಂಚನಾ.ಎ, ಕೀರ್ತಿ.ಕೆ.ಬಿ, ಸುದೀಪ್.ಕೆ ಹಾಗೂನಿಖಿಲ್.ಎನ್ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.
Ad Widget

ಇಂಗ್ಲಿಷ್ ಪಾತ್ರಾಭಿನಯ ಸ್ಪರ್ಧೆಯಲ್ಲಿ ಕೆ.ಪಿ.ಎಸ್. ಬೆಳ್ಳಾರೆ ರಾಜ್ಯಮಟ್ಟಕ್ಕೆ ಆಯ್ಕೆ

ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಎನ್.ಪಿ.ಇ.ಪಿ. ರಾಷ್ಟ್ರೀಯ ಪಾತ್ರಾಭಿನಯ (ಆಂಗ್ಲಭಾಷಾ ಪಾತ್ರಾಭಿನಯ) ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ 9ನೇ ತರಗತಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅವನಿ.ಕೆ, ಶಾಂಭವಿ, ಚಂದನಲಕ್ಷ್ಮೀ, ತನ್ಮಯಿ ಹಾಗೂ ಅಪೇಕ್ಷಾ...

ಬೆಳ್ಳಾರೆ : ಅಜಪಿಲ ದೇವಾಲಯದಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ತೆನೆ (ಕದಿರು) ತುಂಬಿಸುವ ಕಾರ್ಯಕ್ರಮ ಅ. 17 ರ ಶನಿವಾರ ಬೆಳಗ್ಗೆ ಗಂಟೆ 7.45ರ ಶುಭಮುಹೂರ್ತದಲ್ಲಿ ನಡೆಯಲಿದೆ. ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮದನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಐವರ್ನಾಡು : ಅ.19 ರಂದು ಹಸಿರುಸೇನೆ ಘಟಕದ ಕಛೇರಿ ಉದ್ಘಾಟನೆ ಹಾಗೂ ಗೌರವಾರ್ಪಣೆ

ಕ.ರಾ.ರೈತ ಸಂಘ ಹಸಿರುಸೇನೆ ಐವರ್ನಾಡು ಘಟಕ ಸುಳ್ಯ ಇದರ ನೂತನ ಕಛೇರಿಯ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಅ. 19ರ ಸೋಮವಾರದಂದು ಪೂರ್ವಾಹ್ನ ಗಂಟೆ 10 ಕ್ಕೆ ಐವರ್ನಾಡಿನ ಶ್ರೀ ದೇವಿ ಕೃಪಾ ಸಂಕೀರ್ಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವರ್ನಾಡು ಕ.ರಾ.ರೈ ಸಂಘದ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ವಹಿಸಲಿದ್ದಾರೆ. ಕ.ರಾ. ರೈತ ಸಂಘದ ಪ್ರಧಾನ...

ಪಂಜ : ಮರ ಬಿದ್ದು ಕಾರು ಸಂಪೂರ್ಣ ಜಖಂ

ಪಂಜ ಪೇಟೆಯ ಸಮೀಪ ಕಾರ್‌ ವರ್ಕಶಾಪ್ ಬಳಿ ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಅ .15 ರಾತ್ರಿ ಭಾರಿ ಗಾತ್ರದ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಏನೆಕಲ್ಲಿನವರದ್ದು ಎಂದು ತಿಳಿದುಬಂದಿದೆ.

ಹೆರಿಗೆ ವೇಳೆ ರಕ್ತಸ್ರಾವ – ಮರ್ಕಂಜ ಮೂಲದ ಮಹಿಳೆ ಮೃತ್ಯು

ಮರ್ಕಂಜದಿಂದ ಒಂದುವರೆ ವರ್ಷಗಳ ಹಿಂದೆ ಪುತ್ತೂರಿನ ಕಾವು ಗೆ ಮದುವೆಯಾಗಿದ್ದ ಮಹಿಳೆ ಅ.15 ರಂದು ಹೆರಿಗೆ ವೇಳೆ ರಕ್ತಸ್ರಾವಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25 ) ಮೃತಪಟ್ಟ ದುರ್ದೈವಿ. ಹೆರಿಗೆಗೆಂದು ಪುತ್ತೂರಿನ ಪ್ರಗತಿ ಹಾಸ್ಟಿಟಲ್ ಗೆ ದಾಖಲಾಗಿದ್ದರು. ಅಲ್ಲಿ ಹೆರಿಗೆ ವೇಳೆ ರಕ್ತಸ್ರಾವ...
error: Content is protected !!