
ಮರ್ಕಂಜದಿಂದ ಒಂದುವರೆ ವರ್ಷಗಳ ಹಿಂದೆ ಪುತ್ತೂರಿನ ಕಾವು ಗೆ ಮದುವೆಯಾಗಿದ್ದ ಮಹಿಳೆ ಅ.15 ರಂದು ಹೆರಿಗೆ ವೇಳೆ ರಕ್ತಸ್ರಾವಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.
ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25 ) ಮೃತಪಟ್ಟ ದುರ್ದೈವಿ. ಹೆರಿಗೆಗೆಂದು ಪುತ್ತೂರಿನ ಪ್ರಗತಿ ಹಾಸ್ಟಿಟಲ್ ಗೆ ದಾಖಲಾಗಿದ್ದರು. ಅಲ್ಲಿ ಹೆರಿಗೆ ವೇಳೆ ರಕ್ತಸ್ರಾವ ಉಂಟಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದು ಬಂದಿದೆ. ಆದರೇ ಮಗು ಮಾತ್ರ ಬದುಕುಳಿದಿದೆ ಎಂದು ತಿಳಿದುಬಂದಿದೆ. ಒಂದುವರೆ ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಕಾವು ಬಳ್ಳಿಕಾನ ನಿವಾಸಿ ಪ್ರವೀಣ್ ಎಂಬರಿಗೆ ಮದುವೆ ಮಾಡಿಕೊಡಲಾಗಿತ್ತು.