Ad Widget

ತೋಟಗಾರಿಕಾ ಬೆಳೆಯಾಗಿ ತಾಳೆ ಬೆಳೆ ಪರ್ಯಾಯ ಬೆಳೆಯಾಗಿ ರೈತರಿಗೆ ಮಾಹಿತಿ ಕಾರ್ಯಾಗಾರ


ತಾಳೆ ಬೆಳೆಯ ವಿಸ್ತರಣೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ತೋಟಗಾರಿಕೆ ಬೆಳೆಯಾಗಿ ಸೇರಿಸಿ ಅಡಿಕೆಗೆ ಹಳದಿ ರೋಗ ಬಾಧಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ಪರಿವರ್ತಿಸುವ ಕುರಿತು ಮಾಹಿತಿಯನ್ನು ಅ.9ರಂದು ಸುಳ್ಯ ತೋಟಗಾರಿಕೆ ಇಲಾಖೆಯ ಸಭಾಭವನದಲ್ಲಿ ನಡೆಯಿತು.
ತಾಳೆ ಗಿಡಗಳ ಪೂರೈಕೆಯನ್ನು ಮತ್ತು ಅವುಗಳಿಗೆ ಗೊಬ್ಬರಗಳ ಪೂರೈಕೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಕಂಪನಿಗಳು ಹಾಗೂ ಇಲಾಖೆಗಳು ವಿಫಲವಾಗಿವೆ. ಸೂಕ್ತ ವ್ಯವಸ್ಥೆಗಳನ್ನು ಕೇಂದ್ರೀಯ ಸಂಶೋಧನ ಮಂಡಳಿಗಳಲ್ಲಿ ನಿಯೋಜಿಸುವ ಅಗತ್ಯತೆ ಇದೆ ಎಂದು ಬೆಳೆಗಾರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ವಸಂತ ಭಟ್ ತೊಡಿಕಾನ ಹೇಳಿದರು.

. . . . . . .


ಈಗಾಗಲೇ ಸುಳ್ಯ ತಾಲೂಕಿನಾದ್ಯಂತ ಅಡಿಕೆಗೆ ಹಳದಿ ರೋಗ ಭಾದೆ ಕುರಿತು ತೋಟಗಾರಿಕೆ ಇಲಾಖೆಯಿಂದ ಸರ್ವೆ ನಡೆಸಲಾಗಿದ್ದು ಸುಮಾರು 1300 ಹೆಕ್ಟೇರ್ ಭಾದಿತ ಪ್ರದೇಶವಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ಆದರೆ ಹಳದಿರೋಗ ಮೊದಲನೆ ಹಂತದಲ್ಲಿ ಬೇರುಗಳಿಗೆ, ದ್ವಿತೀಯ ಹಂತದಲ್ಲಿ ಮರಗಳಿಗೆ ಬರುತ್ತದೆ. ಹಾಗಾಗಿ ಪ್ರದೇಶ ಸುಮಾರು 10 ಸಾವಿರ ಹೆಕ್ಟೇರ್ ಗಳಿಗೆ ವಿಸ್ತರ ವಾಗಿರಬಹುದು. ಈಗಾಗಲೇ ಹಳದಿ ರೋಗ ಪೀಡಿತ ಪ್ರದೇಶಗಳಿಗೆ ‘ದಂಡಿನ ಆಯೋಗ’ ಅಧ್ಯಯನ ತಂಡ ಅಧ್ಯಯನ ನಡೆಸಿ ಹಳದಿ ರೋಗಕ್ಕೆ ಪರಿಹಾರವಿಲ್ಲ ಸರಿಯಾದ ಬೆಲೆ ಮತ್ತು ಆರ್ಥಿಕ ನಷ್ಟ ಎನ್ನುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಆದ್ದರಿಂದ ಹಳದಿ ರೋಗ ಬಾಧಿತ ಪ್ರದೇಶಗಳಿಗೆ ತಾಳೆ ಬೆಳೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಸಬಹುದಾಗಿದೆ ಎಂದು ಅವರು ಹೇಳಿದರು.
ನಮ್ಮ ಭಾರತ ದೇಶಕ್ಕೆ ಸುಮಾರು 100 ಲಕ್ಷ ಟನ್ ತಾಳೆ ಬೇಡಿಕೆಯಿದೆ. ನಮ್ಮಲ್ಲಿ ಕೇವಲ ಮೂರು ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಉಳಿದ ತಾಳೆಹಣ್ಣುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಾವಲಂಬಿಯಾಗುವ ಉದ್ದೇಶದಿಂದ ವಿಶೇಷ ಪ್ಯಾಕೇಜ್ 11 ಸಾವಿರ ಕೋಟಿ ಅನುದಾನವನ್ನು ಘೋಷಿಸಲಾಗಿದ್ದು, ಇದನ್ನು ತೋಟಗಾರಿಕೆ ಬೆಳೆಯಾಗಿ ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ 15 ಸಾವಿರ‌ ಹೆಕ್ಟೇರ್ ತಾಳೆ ಬೆಳೆ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಆಸಕ್ತ ರೈತರು ತೋಟಗಾರಿಕೆ ನೇತೃತ್ವದಲ್ಲಿ ತಾಳಿಯನ್ನು ಬೆಳೆಯಬಹುದಾಗಿದೆ. ಈ ಕುರಿತಾಗಿ ಭಾರತೀಯ ಎಣ್ಣೆ ಬೆಳೆಗಾರರ ಸಹಕಾರಿ ಸಂಘದ ಸಹಯೋಗದೊಂದಿಗೆ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾ.ಕೃ.ಪ.ಸ ಸಂಘಗಳ ಮುಖಾಂತರ ರೈತರಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ಈ ಮಾಹಿತಿ ಕಾರ್ಯಾಗಾರದಲ್ಲಿ ತಾಲೂಕು ಸಂಘದ ಅಧ್ಯಕ್ಷ ಚಂದ್ರಾ‌‌‌ ಕೋಲ್ಚಾರ್, ತೋಟಗಾರಿಕೆ ಇಲಾಖೆಯ ಹಿರಿಯ ಅಧೀಕ್ಷೆ ಶ್ರೀಮತಿ ಸುಹಾನ ದೇರಾಜೆ, ಅಧೀಕ್ಷಕರಾದ ಹರಬಣ್ಣ ಪೂಜಾರ್ ತ್ರಿಎಫ್ ಫಾರ್ಮ್ ಕಂಪನಿಯ ತಾಲೂಕು ಮೇಲ್ವಿಚಾರಕರಾದ ರವಿಶಂಕರ್ ತೊಡಿಕಾನ, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!