ಸೂಡಾ ಸಮಸ್ಯೆಗೆ ಮನವಿ ಮುಖ್ಯಮಂತ್ರಿಗಳಿಂದ ತಕ್ಷಣ ಸ್ಪಂದನೆ
ನಗರ ಪಂಚಾಯತ್ ಕರ್ನಾಟಕ ಸರಕಾರ ಪುರಸಭೆಯಾಗಿ ಪರಿವರ್ತಿಸುವ ಹಂತದಲ್ಲಿದೆ. ಈ ಹಂತದಲ್ಲಿ ಸೂಡಾ ನಿಯಮವನ್ನು ರೂಪಿಸಲಿದೆ. ಈ ನಿಯಮದಿಂದಾಗಿ ಸುಳ್ಯ ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವಾಗ ನಾಲ್ಕು ಕಡೆಗಳಿಂದ ರಸ್ತೆಯು ಮುಖ್ಯ ರಸ್ತೆಗೆ ೬ಮೀ. ಸಾದ ರಸ್ತೆಗೆ ೪.೫ ಮೀ ಜಾಗವನ್ನು ಬಿಟ್ಟು ಮನೆ ನಿರ್ಮಿಸುವಂತೆ ಸರಕಾರದಿಂದ ಸೂಚಿಸಲಾಗಿದೆ.
ಸುಳ್ಯ ೫ ಸೆಂಟ್ಸ್ ಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಮನೆ ನಿರ್ಮಿಸಲು ಅಸಾಧ್ಯವಾಗಿದೆ. ಅಲ್ಲದೇ ಸುಳ್ಯ ನಗರವು ಮಲೆನಾಡು ಪ್ರದೇಶವಾಗಿದ್ದು ಇತರ ಜಿಲ್ಲೆಗಳಿಗೆ ಹೋಲಿಸಿದರೇ ಸುಳ್ಯದಲ್ಲಿ ೨ ರಿಂದ ೫ ಸೆಂಟ್ಸ್ ನಿವೇಶನ ಹೊಂದಿರುವರ ಸಂಖ್ಯೆ ಅಧಿಕವಾಗಿದೆ. ಈ ನಿಯಮದ ಅನುಸಾರ ಜಾಗ ಬಿಟ್ಟು ಕೊಡಲು ಅಸಾಧ್ಯ. ಈ ಸಮಸ್ಯೆಯ ಕುರಿತಾಗಿ ಸುಳ್ಯದ ಸಾಮಾಜಿಕ ಕಾರ್ಯಕರ್ತ ಡಿ.ಎಂ.ಶಾರೀಖ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ ಸರಕಾರದ ಕಾರ್ಯದರ್ಶಿಗಳು ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
- Tuesday
- December 3rd, 2024