
ಪೈಚಾರು ಅಂಗಡಿ-ಮುಂಗಟ್ಟುಗಳ ಮುಂದೆ ನಡುರಸ್ತೆಯಲ್ಲಿ ನಾಗರಹಾವು ಹೆಡೆ ಎತ್ತಿ ನಿಂತು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿತ್ತು. ರಸ್ತೆದಾಟಲು ಶ್ರಮಿಸಿದ ನಾಗರಹಾವು ಸಾರ್ವಜನಿಕರು ಸೇರಿ ಕೊಂಡಿರುವುದನ್ನು ಕಂಡು ಭಯಬೀತ ವಾಗಿ ಸ್ವಲ್ಪ ಸಮಯಗಳ ಕಾಲ ಹೆಡೆ ಎತ್ತಿ ಪ್ರತಿರೋಧ ತೋರಿಸುತ್ತಿತ್ತು. ಸ್ಥಳೀಯರು ತಮ್ಮ ಮೊಬೈಲ್ನಿಂದ ಫೋಟೋ ಕ್ಲಿಕ್ಕಿಸಿ ಪತ್ರಿಕೆಗೆ ಕಳುಹಿಸಿದರು. ಸ್ವಲ್ಪ ಸಮಯದ ನಂತರ ಹಾವು ಪಕ್ಕದ ಕಾಡಿನ ಬಳಿ ಸಾಗಿದೆ.