ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಅಕ್ಟೋಬರ್ 4ರಂದು ಪೈಚಾರು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಜಮಾಅತ್ ಸಮಿತಿಯ ಅಧ್ಯಕ್ಷ ಇಬ್ರಾಹಿಮ್ ಪಿ ಕೆ ವಹಿಸಿದರು.
ದುವಾ ಹಾಗೂ ಉದ್ಘಾಟನೆಯನ್ನು ಬಿಜೆಎಮ್ ಖತಿಬರಾದ ಮುನೀರ್ ಸಖಾಫಿಯವರು ನೇರವೆರಿಸಿದರು.
ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಅರ್ತಾಜೆ ಮಂಡಿಸಿದರು.
ಸಭೆಯಲ್ಲಿ ಮುಂದಿನ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ನಂತರ 2020 .21 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ಬಾಸಿ ಪಿ,ಉಪಾಧ್ಯಕ್ಷ ಮುಸ್ತಫಾ ಎಸ್ ಯು.ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ ಜೊತೆ ಕಾರ್ಯದರ್ಶಿ ಮುಜೀಬ್ ಪೈಚಾರ್.ಹನೀಫ್ ಪಿಕೆ.
ಕೋಶಾಧಿಕಾರಿಮೊಹಿದಿನ್ ಹಾಜಿ ಎಸ್ ಎ.ಸದಸ್ಯರುಗಳು ಬಶೀರ್ ಆರ್ ಬಿ,ರಫೀಕ್ ಎಸ್ ವೈ,ಸಿದ್ದೀಕ್ ಕೆ ಪಿ,ಅಬೀದ್ ಕೆ ಪಿ,ಲತೀಫ್ ಟಿ ಎ .
ರವರನ್ನು ಅಯ್ಕೆ ಮಾಡಲಾಯಿತು.
ಮುಜೀಬ್ ಪೈಚಾರ್ ಸ್ವಾಗತಿಸಿ. ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.