- Thursday
- November 21st, 2024
ದೇವಚಳ್ಳ ಗ್ರಾಮದ ವಾಲ್ತಾಜೆ ರವೀಂದ್ರ ಹಾಗೂ ಕುಸುಮಾವತಿ ದಂಪತಿಗಳ ಪುತ್ರ ರಕ್ಷಿತ್ ವಿ.ಆರ್. (ವಿನು) ರವರ ವಿವಾಹ ನಿಶ್ಚಿತಾರ್ಥವು ಜಾಲ್ಸೂರು ಗ್ರಾಮದ ಕಾಳಮನೆ ಮಾಧವ ಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ ಅಶ್ವಿನಿ ಯೊಂದಿಗೆ ಅ.31 ರಂದು ವಧುವಿನ ಮನೆಯಲ್ಲಿ ನಡೆಯಿತು.
ಗುತ್ತಿಗಾರು ಗ್ರಾಮದ ವಿವಿಧ ಬೂತ್ಗಳ ಬಿಜೆಪಿ ಕಾರ್ಯಕರ್ತರ ಸಭೆಯು ಅ.30ರಂದು ಚಿಕ್ಮುಳಿಯಲ್ಲಿ ನಡೆಯಿತು. ಗುತ್ತಿಗಾರು ಗ್ರಾಮದ ಬೂತ್ ಸಂಖ್ಯೆ 121, 122ನೇ ಬೂತಿನ ಕಾರ್ಯಕರ್ತರ ಸಭೆಯು ಅ 30 ರಂದು ದೇವಿಪ್ರಸಾದ್ ಚಿಕ್ಮುಳಿ ಇವರ ಮನೆಯಲ್ಲಿ ನಡೆಯಿತು. ಸಭೆಗೆ ಮಾನ್ಯ ಶಾಸಕರಾದ ಶ್ರೀ ಎಸ್ ಅಂಗಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ಸುಳ್ಯ ಮಂಡಲ...
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣದ ಪದಗ್ರಹಣ ಸಮಾರಂಭ ಇಂದು ಸುಳ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಭಾ.ಜ.ಪಾ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಅಜಿತ್ ಉಳ್ಳಾಲ, ಜಿಲ್ಲಾ ಸಹ ಸಂಚಾಲಕ ಸಂದೀಪ್...
ದೇವಚಳ್ಳ ಗ್ರಾಮದ ಮಾವಿನಕಟ್ಟೆ ರಾಧಾಕೃಷ್ಣ ಶ್ರೀಕಟೀಲ್ ರವರ ಪುತ್ರಿ ರಮ್ಯಶ್ರೀ ಯ ವಿವಾಹ ನಿಶ್ಚಿತಾರ್ಥವು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ದಿ. ಬಾಲಕೃಷ್ಣ ಗೌಡರ ಪುತ್ರ ಕುಮಾರ್ ರೊಂದಿಗೆ ಅ.31 ರಂದು ಮಾವಿನಕಟ್ಟೆಯ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.
ಸುಳ್ಯ ಭಾಗದ ಹೆಚ್ಚು ಜನ ಕೃಷಿಕರಾಗಿದ್ದು ಅತೀ ಹೆಚ್ಚು ಅಡಿಕೆ ಹಾಗೂ ಜತೆಗೆ ರಬ್ಬರ್ ಬೆಳೆಗಾರರನ್ನು ಹೊಂದಿದ್ದಾರೆ. ಈ ಬಾರಿ ಕೃಷಿಕರಿಗೆ ಅಡಿಕೆ ಧಾರಣೆ ಏರಿಕೆಯಿಂದ ರೈತರ ಮೊಗದಲ್ಲಿ ಖುಷಿ ಕಂಡಿದೆ.ಅಡಿಕೆ ಹಾಗೂ ರಬ್ಬರ್ ಧಾರಣೆ ಯ ಬಗ್ಗೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಡಪ್ಪಾಡಿಯ ಎಂ.ಡಿ.ವಿಜಯಕುಮಾರ್ ಧಾರಣೆ ಏರಿಳಿತದ ಬಗ್ಗೆ ದಾಖಲಿಸಿದ್ದಾರೆ. 1980 ರಲ್ಲಿ...
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ ಇಂದಾಜೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪತ್ರಕರ್ತರಾಗಿ ಹಾಗೂ ಸಂಘದ ಅಧ್ಯಕ್ಷರಾಗಿ ಪತ್ರಕರ್ತರ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮದ ಮೂಲಕ ಸಮಾಜಮುಖಿ ಕಾರ್ಯಕ್ರಮ ಸಂಘಟಿಸಿ ಮೆಚ್ಚುಗೆ ಗಳಿಸಿದ್ದರು. ಸುಳ್ಯದ ಮಡಪ್ಪಾಡಿ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹಾಗೂ ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಅವರಿಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹಾಗೂ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಗತಿಪರ ಕೃಷಿಕ ಐವರ್ನಾಡಿನ ವಿಶ್ವನಾಥ ಪೈ ಅವರಿಗೆ ಕೂಡ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ಆದೇಶಿಸಲಾಗಿದ್ದು, ಮರಕತ ಅರ್ಚಕರಾಗಿರುವ ಜಗದೀಶ್ ಭಟ್, ಸತೀಶ್ ಬಂಬುಲಿ, ರೋಹಿಣಿ ದೇರಪ್ಪಜ್ಜನಮನೆ, ಮೋಹನಾಂಗಿ ಉದೇರಿ, ಚಂದ್ರಶೇಖರ ಕೊರಂಬಟ, ಚಿನ್ನಪ್ಪ ಪಡ್ರೆ, ಶ್ಯಾಮಯ್ಯ ಎಚ್. ಚೆಮ್ನೂರು, ಚಂದ್ರಶೇಖರ ಬಾಳುಗೋಡು, ಹರಿಪ್ರಸಾದ್ ಕಲ್ಲಾಜೆ ಯವರನ್ನು ನೇಮಕಗೊಳಿಸಿದೆ.
ಸುಳ್ಯ ಅರಂಬೂರು ಬದ್ರ್ ಮಸ್ಜಿದ್ ನಲ್ಲಿ ಹಲವಾರು ವರ್ಷಗಳಿಂದ ಮುಸಲ್ಮಾನ ಬಾಂಧವರು ದಿನದ ಐದು ಸಮಯದ ನಮಾಜ್ ನಿರ್ವಹಿಸಿಕೊಂಡು ಬರುತ್ತಿದ್ದರು. ಇದೀಗ ಈ ಮಸ್ಜಿದ್ ನಲ್ಲಿ ಶುಕ್ರವಾರ ದಿನದ ಸಾಮೂಹಿಕ ಜುಮ್ಮಾ ನಮಾಜ್ ನಿರ್ವಹಣೆಗೆ ಇಂದು ಚಾಲನೆ ನೀಡಲಾಯಿತು. ದಕ್ಷಿಣ ಕರ್ನಾಟಕ ಸಮಸ್ತ ಜಂಇಯ್ಯತ್ತುಲ್ ಉಲೇಮಾದ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರವರು...
Loading posts...
All posts loaded
No more posts