Ad Widget

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ಶ್ರೀರಾಮ ಮಂದಿರ – ಶ್ರೀರಾಮ ಮಂದಿರ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿದೆ

📝📝………ಭಾಸ್ಕರ ಜೋಗಿಬೆಟ್ಟು
ಪ್ರಚಾರ ಪ್ರಸಾರ ಪ್ರಮುಖ್, ವಿಶ್ವ ಹಿಂದೂ  ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ

 ಸುತ್ತಲೂ ಭಜನೆಗಳು ಆರಂಭವಾಗಿದೆ , ಪ್ರತಿಯೊಂದು ಕಡೆ ಮನೆಗಳು ದೀಪಾಲಂಕರದಿಂದ ಕೂಡಿದೆ. ಕೇಸರಿ ಬಾವುಟಗಳು ರಾರಾಜಿಸುತ್ತಿವೆ ,ಭಕ್ತರ ಮನ ಮನದಲ್ಲಿ ರಾಮ ನಾಮ ಕೇಳಿ ಬರುತ್ತಿದೆ. ರಸ್ತೆಯ , ಮನೆಯ , ಕಂಪೌಂಡ್ ತಡೆಗೋಡೆಯ ಮೇಲೆ ಶ್ರೀ ರಾಮ ಚಂದ್ರನ ಚಿತ್ರವನ್ನು ಬಿಡಿಸಲಾಗಿದ್ದು ಅಯೋಧ್ಯ ನಗರ ಸಂಪೂರ್ಣ ಕೇಸರಿಮಯವಾಗಿದೆ.    ಸಾವಿರಾರು ವರ್ಷಗಳ ಹಿಂದಿನ ಹೋರಾಟಕ್ಕೆ ಫಲ ಸಿಕ್ಕಿದೆ. ಕೋಟ್ಯಾಂತರ ಹಿಂದು ಭಕ್ತರ ಹೋರಾಟ , ಬಲಿದಾನಕ್ಕೆ ಪೂರಕವಾಗಿ ಇಂದು ಶ್ರೀ ರಾಮ ಚಂದ್ರನ ಜನ್ಮ ಸ್ಥಳವಾದ  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಎಲ್ಲಾ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. 

 ಧಾರ್ಮಿಕ , ಸೌಹಾರ್ದತೆಯ ಸಂಕೇತವಾದ ಶ್ರೀ ರಾಮ ಮಂದಿರಕ್ಕೆ ಆಗಸ್ಟ್ ೫ ರಂದು ಪ್ರಧಾನಿ ಮೋದಿ ಅವರು ಬೆಳ್ಳಿಯ ಇಟ್ಟಿಗೆಯನ್ನು ಇಡುವುದರ ಮೂಲಕ ರಾಮ ಮಂದಿರ ಶಿಲಾನ್ಯಾಸ ಮಾಡಲಿದ್ದಾರೆ . ಹಲವು ವರ್ಷಗಳಿಂದ ವಿವಾದಕ್ಕೆ ಸುದ್ದಿಯಾಗಿದ್ದ ಅಯೋಧ್ಯೆಯ ಭೂಮಿಯು ಸುಪ್ರೀಂಕೋರ್ಟ್ ತೀರ್ಪು ನೀಡುವುದರ ಮೂಲಕ ಮಂದಿರ ನಿರ್ಮಾಣಕ್ಕೆ ಕಾಲಾವಕಾಶ ಒದಗಿ ಬಂದಿದೆ.  ರಾಮಾಯಣ ಕತೆ, ಅಯೋಧ್ಯ ರಾಮ ಮಂದಿರದ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒಳಗೊಂಡ ಒಂದು ಸಂಪುಟವನ್ನು ಮಂದಿರ ನಿರ್ಮಾಣ ಮಾಡುವ ಜಾಗದ ೨೦೦೦ ಅಡಿ ಆಳದಲ್ಲಿ ಇಡಲಾಗುತ್ತದೆ. ಮಂದಿರದ ನೀಲ ನಕಾಶೆ ಸಿದ್ಧವಾಗಿದ್ದು ಪುರಾತನ ಕತೆಯ ಚಿತ್ರಣವನ್ನು ಒಳಗೊಂಡ ಸುಂದರವಾದ, ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದೆ. 

ಅಗಸ್ಟ್ ೫ ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವು ಟಿವಿ ಚಾನಲ್ಗಳಲ್ಲಿ ತೋರಿಸಲಾಗುತ್ತಿದ್ದು ಪ್ರತಿಯೊಬ್ಬ ಭಕ್ತರು ಕುಳಿತಲ್ಲಿಂದಲೇ ಕಣ್ತುಂಬಿಕೊಳ್ಳುವಂತಾಗಬೇಕು. ಈ ಸುವರ್ಣ ದಿನದಂದು ದೇಶಾದ್ಯಂತ ಪ್ರತಿ ಮನೆಯಲ್ಲೂ ಶ್ರೀ ರಾಮ ನಾಮ ಮೊಳಗಬೇಕು. ಪ್ರತಿ ಮನೆಯಲ್ಲೂ ಭಜನೆ ಕಾರ್ಯಕ್ರಮ ನೆರವೇರಬೇಕು. ಪ್ರತಿ ಮನೆಯು ದೀಪಾಲಂಕಾರದಿಂದ ಕಂಗೊಳಿಸಬೇಕು. ಈ ಒಂದು ಪುಣ್ಯ ಕಾರ್ಯದಲ್ಲಿ ನಾವೆಲ್ಲರು ಕಣ್ತುಂಬಿಕೊಳ್ಳುವಂತಾಗಬೇಕು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!