Ad Widget

ಪೆರಾಜೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ

ಹಿಂದೂ ಜಾಗರಣ ವೇದಿಕೆ ಪೆರಾಜೆ ಘಟಕ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇಲ್ಲಿ ಇಂದು ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಘಟಕದ ಗೌರವಾಧ್ಯಕ್ಷರಾದ ಸೀತಾರಾಮ್ ಕಡಿಕಡ್ಕ, ಅಧ್ಯಕ್ಷರಾದ ಮನೋಜ್ ಕುಂಟಿಕಾನ, ಕಾರ್ಯದರ್ಶಿ ಭುವನ್ ಕುಂಬಳಚೇರಿ, ಸಂಪರ್ಕ ಪ್ರಮುಖ್ ಸುಭಾಶ್ ಬಂಗಾರಕೋಡಿ,ಪ್ರಚಾರ ಪ್ರಮುಖ್ ವಿನಯ್ ಮೂಲೆಮಜಲು, ಮತ್ತು ಘಟಕದ ಇತರ ಪಧಾಧಿಕಾರಿಗಳು ಹಾಗೂ ಪೆರಾಜೆ...

ಸುಬ್ರಹ್ಮಣ್ಯದ ರಥಬೀದಿಯಲ್ಲಿರುವ ಹೋಟೆಲ್ ಸಿಬ್ಬಂದಿಗೆ ಪಾಸಿಟಿವ್

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷೆ ವೇಳೆ ಮೂರು ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ . ಕಳೆದ ವಾರ ರಥಬೀದಿಯ ಹೊಟೇಲೊಂದರ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು . ಇಂದು ಅವರನ್ನು ರಾಂಡಮ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ ಮೂವರಿಗೆ ಇಂದು ಕೊರೋನಾ ಪಾಸಿಟಿವ್...
Ad Widget

ಊರುಬೈಲು ಕೋಳಿ ಅಂಕಕ್ಕೆ ಪೋಲೀಸ್ ದಾಳಿ

ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ಇಂದು ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಡಿಕೇರಿ ಕ್ರೈಮ್ ಬ್ರಾಂಚ್ ಪೊಲೀಸರು ದಾಳಿ ನಡೆಸಿ ಕೋಳಿ, ನಗದು ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಳಿ ಅಂಕದಲ್ಲಿ ನಿರತರಾಗಿದ್ದ ೧೦ ಮಂದಿ ಯನ್ನು ಬಂಧಿಸಿ ಹಾಗು 20 ಕೊಳಿ,2 ಜೀಪು ಸೇರಿದಂತೆ ಇತರ ಅನೇಕ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಳಿ ಅಂಕದಲ್ಲಿ ನಿರತರಾಗಿದ್ದ...

ಈ ನತದೃಷ್ಟ ತಾಯಿ-ಮಗನಿಗೆ ಸಹಾಯ ಮಾಡುವಿರಾ?

ಪ್ರಪಂಚದಲ್ಲಿ ಕಷ್ಟ ಪಟ್ಟವನೇ ಮತ್ತೆ ಕಷ್ಟಪಡಬೇಕೆಂಬ ನಿಯಮವನ್ನು ಭಗವಂತ ಬರೆದಿದ್ದಾನೋ ಏನೋ? ಇಲ್ಲವಾದಲ್ಲಿ ಈ ರೀತಿಯ ದುರದೃಷ್ಟಕರ ಪರಿಸ್ಥಿತಿ ಈ ತಾಯಿ ಮಗನಿಗೆ ಅದೇಕೆ ಕೊಟ್ಟನೋ ಗೊತ್ತಿಲ್ಲ. ಹೌದು. ಈ ನತದೃಷ್ಟರ ಬದುಕು ಕಂಡಾಗ ಯಾರಿಗಾದರೂ ಕರುಳು ಚುರುಕ್ ಎನ್ನದಿರದು?.ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಹೊನ್ನಡಿಯಲ್ಲಿ ಹರಕು ಜೋಪಡಿಯಲ್ಲಿ ಬದುಕು ಸಾಗಿಸುತ್ತಿರುವ ವೃದ್ದೆ ಸರಸ್ವತಿಯ ಬದುಕು...

ಆರೋಗ್ಯ ಇಲಾಖಾ ಸಿಬ್ಬಂದಿಗೆ ಪಾಸಿಟಿವ್ – ಪೆರಾಜೆಯ 6 ಮನೆ ಸೀಲ್ ಡೌನ್

ಸುಳ್ಯ ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಿರುವ ಪೆರಾಜೆಯ ಬಂಟೋಡಿಯ ವ್ಯಕ್ತಿಗೆ ನಿನ್ನೆ ಪಾಸಿಟಿವ್ ಬಂದಿತ್ತು. ಇಂದು ಅವರ ಮನೆಯವರೆಲ್ಲರಿಗೂ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಹಾಗೂ ಸಮೀಪದ 5 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಎಣ್ಮೂರು ಗ್ರಾಮ ಎಡಮಂಗಲ ಗ್ರಾಮಕ್ಕೆ ಸೇರ್ಪಡೆ ಹಿನ್ನೆಲೆ ಕಡತಗಳನ್ನು ಇಂದು ಹಸ್ತಾಂತರ

ಎಣ್ಮೂರು ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಮುರುಳ್ಯ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ ಇವರು ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜ ಇವರಿಗೆ ಹಸ್ತಾಂತರಿಸುವ ಮುಖೇನ ಎಣ್ಮೂರು ಗ್ರಾಮದ ಸಂಪೂರ್ಣ ಆಡಳಿತಾತ್ಮಕ ಜವಾಬ್ದಾರಿಯನ್ನು ಎಡಮಂಗಲ ಗ್ರಾಮ ಪಂಚಾಯಿತ್ ಗೆ ವಹಿಸಲಾಯಿತು. ಸುಳ್ಯ ತಾಲೂಕು...

ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿಗೊಂಡು ಸುಳ್ಯಕ್ಕೆ ಆಗಮಿಸಿದ ಆನಂದ ನಾಯ್ಕ್

ಚಿಕ್ಕಮಗಳೂರು ಕಡೂರು ನಿವಾಸಿ ಆನಂದ ನಾಯ್ಕ್ ಹೆಡ್ ಕಾನ್ಸ್ ಟೇಬಲ್ ಆಗಿ ಮುಂಭಡ್ತಿಗೊಂಡು ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ . ಇವರು ಕಳೆದ 8 ವರ್ಷಗಳಿಂದ ಸೇವೆಯಲ್ಲಿದ್ದು ಆರಂಭದಿಂದಲೂ ಸುಬ್ರಹ್ಮಣ್ಯ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದರು. ಕಳೆದ ವರ್ಷ ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯಕ್ಕೆ ವರ್ಗಾವಣೆ ಗೊಂಡಿದ್ದರು.ಇದೀಗ ಹೆಡ್ ಕಾನ್ ಸ್ಟೇಬಲ್ ಭಡ್ತಿಗೊಂಡು ಆ .16...

ಬಿಜೆಪಿ ಯುವ ಮೋರ್ಚಾ ಪದಗ್ರಹಣ ಸಮಾರಂಭ

ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರಥಮ ಕಾರ್ಯಕಾರಿಣಿ ಸಭೆಯು ಸುಳ್ಯ ಬಿಜೆಪಿ ಕಛೇರಿಯಲ್ಲಿ ಇಂದು ಜರುಗಿತು.ಸಭೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್, ಪ್ರ.ಕಾರ್ಯದರ್ಶಿ ಸುದರ್ಶನ ಬಿಸಿರೋಡ್, ಕಾರ್ಯದರ್ಶಿ ಸುಧಾಕರ್ ಧರ್ಮಸ್ಥಳ, ಸುಳ್ಯ ಮಂಡಲ ಪ್ರದಾನ...

ಸುಳ್ಯ ರೋಟರ‍್ಯಾಕ್ಟ್ ಕ್ಲಬ್ – ಅಧ್ಯಕ್ಷ ಶಹೀದ್ ಪಾರೆ – ಪ್ರಧಾನ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ನಿಡ್ಯಮಲೆ

ಸುಳ್ಯ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶಹೀದ್ ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮ್‌ಪ್ರಸಾದ್ ನಿಡ್ಯಮಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಣೀತ್ ಕಣಕ್ಕೂರು, ಖಜಾಂಜಿಯಾಗಿ ಪೂವೇಂದ್ರ ಕೂಟೇಲು, ಕ್ಲಬ್ ಸರ್ವಿಸ್ ಆಗಿ ಚೇತನ ಕಜೆಗದ್ದೆ, ಕಮ್ಯುನಿಟಿ ಸರ್ವಿಸ್ ಆಗಿ ವಿಷ್ಣುಪ್ರಸಾದ್ ಕೆದಿಲಾಯ, ಇಂಟರ್‌ನ್ಯಾಷನಲ್ ಸರ್ವಿಸ್ ಸುರೇಶ್ ಕಾಮತ್, ವೊಕೇಶನಲ್ ಸರ್ವಿಸ್ ಆಗಿ ಭವಾನಿಶಂಕರ್ ಕಲ್ಮಡ್ಕ, ದಂಡಾಧಿಕಾರಿಯಾಗಿ ಮಧುಸೂಧನ ಬೂಡು, ಬುಲೆಟಿನ್...

ಸುಬ್ರಹ್ಮಣ್ಯ ಮೆಸ್ಕಾಂ ಉಪವಿಭಾಗದ ವತಿಯಿಂದ‌ ಅನುಷ್ ಗೆ ಸನ್ಮಾನ

ಎಸ್ಸೆಸ್ಸೆಲ್ಸಿ‌ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅನುಷ್ ಎ.ಎಲ್. ಅವರನ್ನು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗದ ವತಿಯಿಂದ‌ ಈ ದಿನ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅನುಷ್ ತಂದೆ ಗುತ್ತಿಗಾರು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಆಗಿರುವ ಲೋಕೇಶ್ ಎಣ್ಣೆಮಜಲು,ತಾಯಿ ಉಷಾ ಲೋಕೇಶ್, ಸುಬ್ರಹ್ಮಣ್ಯ ಮೆಸ್ಕಾಂ‌ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್...
Loading posts...

All posts loaded

No more posts

error: Content is protected !!