ರಸ್ತೆ ಅಭಿವೃದ್ಧಿಗೆ ತಡೆಯಲು ಡಿಸಿ ಗೆ ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ
ತನ್ನ ಹೆಸರು ಬಳಸಿ ಅವಮಾನ ಮಾಡಿದ್ದಾರೆಂದು ಅವರ ವಿರುದ್ಧ ಗ್ರಾಮಸ್ಥರಾದ ವಿಶ್ವನಾಥ ಆಚಾರ್ಯ ಕೋಣೆಕಾನ, ದೈವಕ್ಕೆ ಮೊರೆ ಹೋಗುವುದಾಗಿ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಅವರು ” ಇತ್ತೀಚಿಗೆ ನಮ್ಮ ಶಾಸಕರ ಸಹಕಾರದಿಂದ ಗುತ್ತಿಗಾರಿನ ಮುತ್ತಪ್ಪನಗರದಿಂದ ಚಿಲ್ತಡ್ಕ ಉಳ್ಳಾಕುಲು ಮಾಡ – ಚಿಲ್ತಡ್ಕ ಬೈಲು, ಗುಡ್ಡೆಮನೆ ಹಾಗೂ ಪೂಜಾರಿಕೋಡಿ ಬೈಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಾಂಕ್ರೀಟ್ ಕರಣವಾದದ್ದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದನ್ನು ಸಹಿಸದ ಕೆಲವು ಮತ್ಸರ ಮನೋಭಾವದ ವಿಘ್ನ ಸಂತೋಷಿಗಳು ಈ ರಸ್ತೆಗೆ ಯಾವುದೇ ಸಂಬಂಧವಿಲ್ಲದ ನನ್ನ ಹೆಸರಿನಲ್ಲಿ ಒಂದು ಅರ್ಜಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ಕಳುಹಿಸಿ ಇದನ್ನು ತಡೆಯಲು ಪ್ರಯತ್ನಿಸಿದ್ದರು. ನಾನು ಈ ಮೂಲಕ ತಿಳಿಯ ಪಡಿಸುವುದೇನೆಂದರೆ ನಮಗೂ ಹಾಗೂ ಆ ಅರ್ಜಿಗೂ ಯಾವುದೇ ಸಂಬಂಧವಿಲ್ಲ. ಸಮಾಜದ ದೃಷ್ಟಿಯಲ್ಲಿ ಸುಮ್ಮಸುಮ್ಮನೆ ನಮ್ಮ ಮನೆಯ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ ವ್ಯಕ್ತಿಗಳಿಗೆ ಅತ್ಯಂತ ಕಾರಣೀಕವಾದ ಸ್ಥಳಕ್ಕೆ ಹರಕೆ ಹೊರಲು ನಿರ್ಧರಿಸಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ.