ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಂತೋಷ್ ಕುಮಾರ್ ರೈ ಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ಯೋಜನಾಧಿಕಾರಿಯಾದ ಸಂತೋಷ್ ಕುಮಾರ್ ರೈ ಯವರಿಗೆ ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
2019-20 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಪ್ರಗತಿನಿಧಿ ವಿತರಣೆ 60 ಕೋಟಿ, ತಂಡಗಳ ರಚನೆಯಲ್ಲಿ , ಕಂತು ಬಾಕಿಗಳ ರಿಕವರಿ , 11 ಲಕ್ಷ ಕೃಷಿ ಅನುದಾನಗಳ ವಿತರಣೆ , ರೂ 2 ಲಕ್ಷ ಅನುದಾನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ , 1 ಕೋಟಿ 72 ಲಕ್ಷ ಮೊತ್ತದ ಸಂಪೂರ್ಣ ಸುರಕ್ಷಾ ವಿಮೆಯ ಪ್ರೀಮಿಯಂ ಸಂಗ್ರಹಣೆ ಹಾಗೂ ರೂ 92 ಲಕ್ಷದ 80 ಸಾವಿರ ಮೊತ್ತದ ಸಂಪೂರ್ಣ ಸುರಕ್ಷಾ ಕ್ಲೈಂ ಮಂಜೂರಾತಿ , 26 ಲಕ್ಷ ವೆಚ್ಚದಲ್ಲಿ ಶಾಲಾಭಿವೃದ್ಧಿ , ದೇವಸ್ಥಾನಗಳ ಅಭಿವೃದ್ಧಿ , ಹಿಂದೂ ರುದ್ರಭೂಮಿ , ಹಾಲು ಉತ್ಪಾದಕರ ಸಂಘ ಹಾಗೂ ಇನ್ನಿತರ ಗ್ರಾಮ ಕಲ್ಯಾಣ ಯೋಜನೆಗಳು , ಜನ ಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ 76 ಮಂದಿಗೆ ವಾಟರ್ ಬೆಡ್ , ವೀಲ್ ಚೆಯರ್‌ , 4190 ನಿರಂತರ ಪ್ರಗತಿ ಮಾಸಿಕ ಚಂದದ ಬಗ್ಗೆ , 165 ವಿದ್ಯಾರ್ಥಿಗಳಿಗೆ 88,000 / – ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ , ನಿರ್ಗತಿಕರಿಗೆ ರೂ 3,85,000 / ಮಾಸಾಶದ ವಿತರಣೆ . 265 ಕುಟುಂಬಗಳಿಗೆ ಸೋಲಾರ್ ಅಳವಡಿಕೆ , 55 ಶ್ರದ್ದಾ ಕೇಂದ್ರಗಳ ಸ್ವಚ್ಛತೆ ಮುಂತಾದ ಗುರಿ ಸಾಧನೆಯಲ್ಲಿ ಅತ್ಯುತ್ತದು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

. . . . . . . . .

ತಾಲೂಕು ಮಟ್ಟದಲ್ಲಿ ಸುಧೀರ್ ಪ್ರಥಮ, ಮುರಳೀಧರ ದ್ವಿತೀಯ, ಲೆಕ್ಕಪರಿಶೋಧನೆಯಲ್ಲಿ ಉಮೇಶ್ ಪ್ರಥಮ, ಜ್ಞಾನವಿಕಾಸ ಕಾರ್ಯಕಮದಲ್ಲಿ ಜಿಲ್ಲಾಮಟ್ಟದಲ್ಲಿ ಭಾರತಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading