ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಮೃತ್ಯು

ಪುತ್ತೂರು : ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅದರ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಇಂದು ನಡೆದಿದೆ . ಕೆಎಸ್‌ಆರ್‌ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ ( 49 ) ಮೃತಪಟ್ಟ ದುರ್ದೈವಿ.

. . . . . . . . .

ಮನೆಯ ಹಿಬ್ಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಎದುರಿನ ಮನೆಯ ಅವರಣ ಗೋಡೆ ಇವರ ಮೇಲೆ ಬಿದ್ದ ಕಾರಣ ದುರ್ಘಟನೆ ನಡೆದಿದೆ.ಅವರಣ ಗೋಡೆ ಇದ್ದ ಮನೆಯ ಮೇಲೆ ಇದ್ದು , ಇವರ ಮನೆಯೂ ಕೆಳಗಡೆ ಇದೆ , ಅವರಣ ಗೋಡೆ ಇರುವ ಮನೆಯ ಇಂಟರ್ ಲಾಕ್ ನಲ್ಲಿ ನೀರು ಶೇಖರಣೆಗೊಂಡು ಕಂಪೌಂಡ್ ಗೋಡೆ ಸಡಿಲಗೊಂಡು ಕುಸಿದಿರಬಹುದು ಎಂದು ತಿಳಿದುಬಂದಿದೆ.
ಅಗ್ನಿಶಾಮಕ ಹಾಗೂ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಯಿತು .

. . . . . . .

ಶಾಸಕ ಸಂಜೀವ ಮಠಂದೂರು , ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ , ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಡಿ.ವೈ.ಎಸ್.ಪಿ. ದಿನಕರ್ ಶೆಟ್ಟಿ , ಸಂಪ್ಯ ಠಾಣಾ ಎಸ್ . ಐ . ಚೆಲುವಯ್ಯ , ನಗರಠಾಣಾ ವೃತ್ತನಿರೀಕ್ಷಕರ ತಿಮ್ಮಪ್ಪ ನಾಯ್‌ ಮತ್ತಿತರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು .

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇದು ಎರಡನೇ ಪ್ರಕರಣವವಾಗಿದ್ದು ಗುರುಪುರದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಇದಕ್ಕೆ ತುರ್ತು ಸ್ಪಂದಿಸಿದ ಮುಖ್ಯಮಂತ್ರಿ ಮೃತ ಮಕ್ಕಳ ಪಾಲಕರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading