ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಕೇರಳ ಗಡಿಯಲ್ಲಿ ಬಿಗುವಿನ ವಾತಾವರಣ

ಕರ್ನಾಟಕ ರಾಜ್ಯದಲ್ಲಿ ಕೊರೊನ ಮಹಾಮಾರಿ ಅಟ್ಟಹಾಸ ಮೆರೆದಿದ್ದು ಇದರಿಂದ ಕೇರಳ-ಕರ್ನಾಟಕ ಸಂಪರ್ಕಿಸುವ ಸಂಪೂರ್ಣ ಗಡಿ ಭಾಗಗಳನ್ನು ಕೇರಳ ಸರ್ಕಾರ ಮುಚ್ಚಿಸಿದೆ. ಕಾಸರಗೋಡು ಭಾಗಗಳಿಂದ ಮಂಗಳೂರಿಗೆ ಉದ್ಯೋಗಕ್ಕಾಗಿ ಹಾಗೂ ಅತ್ಯಾವಶ್ಯಕ ಕೆಲಸಕಾರ್ಯಗಳಿಗಾಗಿ ಆಸ್ಪತ್ರೆ ಗಳಿಗಾಗಿ ಜನರು ಮಂಗಳೂರಿನ ಅವಲಂಬಿಸಿಕೊಂಡಿದ್ದಾರೆ ಸರ್ಕಾರ ಕೈಗೊಂಡ ಈ ಕ್ರಮದಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಕೇರಳದ ಕಾಸರಗೋಡು ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆ ನಿತ್ಯದ ಪಾಸ್ ಬಳಸಿ ಪ್ರಯಾಣ ಮಾಡುತ್ತಿದ್ದರು.ಹಾಗೆ ಮಂಗಳೂರಿಗೆ ಬಂದು ಹೋದ ಐದು ಮಂದಿ ಕೇರಳಿಗರಿಗೆ ಕೊರೋನಾ ಪಾಸಿಟಿವ್ ಆಗಿತ್ತು ಇನ್ನು ಮುಂದೆ ತಿಂಗಳಿಗೊಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು ಅಥವಾ ಮಂಗಳೂರಿನಲ್ಲಿ ಉಳಿದುಕೊಂಡು 28 ದಿನಗಳ ಬಳಿಕ ತಮ್ಮ ಊರಿಗೆ ಬರಬಹುದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಇದು ದಿನನಿತ್ಯ ಪಾಸ್ ಬಳಸಿ ಬರುತ್ತಿದ್ದ ಜನತೆಗೆ ಸಂಕಷ್ಟ ಎದುರಾಗಿದ್ದು ತಲಪಾಡಿ ಗಡಿಭಾಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading