ಮೆಸ್ಕಾಂ ಪ್ರಕಟಣೆ : ನಾಳೆ ( ಅ.19) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಸುಳ್ಯದ 33 /11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ ಹಮ್ಮಿಕೊಂಡಿರುವುದರಿಂದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ದೇವರಗುಂಡ,ಅಜ್ಜಾವರ ಡಿಪೋ, ಜಬಳೆ, ಉಬರಡ್ಕ, ಮಂಡೆಕೋಲು, ತೊಡಿಕಾನ, ಕಲ್ಲುಗುಂಡಿ, ಕೋಲ್ಚಾರ್ ಪೀಡರುಗಳಲ್ಲಿ ಅ.19 ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ 6 ರ ತನಕ ವಿದ್ಯುತ್‌ ವ್ಯತ್ಯಯ...

ಬಿಲ್ಲವ ಸಮಾಜದ ಹೆಣ್ಣುಮಕ್ಕಳು ಮತ್ತು ಭಜನಾ ಮಹಿಳೆಯರ ಬಗ್ಗೆ ಅವಹೇಳನಕಾರಿ ಪದ ಬಳಕೆ – ಉಪ ವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನ

ಪುತ್ತೂರು: ಬಿಲ್ಲವ ಸಮಾಜದ ಹೆಣ್ಣುಮಕ್ಕಳ ಬಗ್ಗೆ ಮತ್ತು ಭಜನೆ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಬಗ್ಗೆ ಕೀಳುಮಟ್ಟದ ಪದ ಬಳಸಿ ಅವಮಾನ ಮಾಡಿರುವ ಆರೋಪದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ...
Ad Widget

ಪೆರುವಾಜೆ ದೇವಸ್ಥಾನಕ್ಕೆ ಸಂಸದರಾದ ಬ್ರಿಜೇಶ್ ಚೌಟ ಭೇಟಿ

ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪದ್ಮನಾಭ ಶೆಟ್ಟಿ ಪೆರುವಾಜೆ, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಹರ್ಷಿತ್ ಪೆರುವಾಜೆ, ಪೆರುವಾಜೆ ಶಕ್ತಿಕೇಂದ್ರ ಪ್ರಮುಖ್ ನಾರಾಯಣ ಕೊಂಡೆಪ್ಪಾಡಿ, ಪೆರುವಾಜೆ ಬೂತ್ ಅಧ್ಯಕ್ಷ ರಮೇಶ್ ಕಾರ್ಯದರ್ಶಿ ವಿಜಯ ಪೆರುವಾಜೆ, ಜಯಪ್ರಕಾಶ್...

ಅರಮನೆಗಯ : ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರಿಗೆ ಗಾಯ – ಆಸ್ಪತ್ರೆಗೆ ದಾಖಲು

ಅರಂತೋಡು ಗ್ರಾಮದ ಅರಮನೆಗಯದಲಗಲಿ  ಶಿಥಿಲಗೊಂಡ ತೂಗು ಸೇತುವೆಯಿಂದ ಬಿದ್ದು ಮೂವರು ಗಾಯಗೊಂಡ ಘಟನೆ ರಾತ್ರ ನಡೆದಿದೆ. ರಾತ್ರಿ ಕೆಲಸ ಮುಗಿಸಿ ಅರಮನೆಗಯ ತೇಜಕುಮಾ‌ರ್ ಅವರ ಮನೆಗೆ ಬರುತ್ತಿದ್ದಾಗ  ಮರಕ್ಕೆ ಕಟ್ಟಿದ್ದ ತೂಗು ಸೇತುವೆಯ ರೋಪ್ ತುಂಡಾಗಿ ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾ‌ರ್ ಅರಮನೆಗಯ ಅವರು ಸೇತುವೆಯಿಂದ ಕೆಳಗಡೆ ಬಿದ್ದರು. ಪರಿಣಾಮವಾಗಿ ಕುಸುಮಾಧರ ಉಳುವಾರು...

ಪಂಜ : ವ್ಯಕ್ತಿಯೋರ್ವ ಆತ್ಮಹತ್ಯೆ

ಪಂಜದ ಮರಿಯ ಮಹಲ್ ಸಮೀಪ ಬಾಡಿಗೆ ರೂಂ ನಲ್ಲಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಹೆಚ್ಚಿನ ವಿವರ ಲಭ್ಯವಾಗಬೇಕಿದೆ.

ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕಿಶೋರ್ ಕುಮಾರ್ ಅವರಿಂದ ನಾಳೆ ( ಅ.18)ಪೆರುವಾಜೆಯಲ್ಲಿ ಪ್ರಚಾರ ಸಭೆ

ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನೆಯಿಂದ ತೆರವಾದ ದ.ಕ.ಮತ್ತು ಉಡುಪಿ ಕ್ಷೇತ್ರಗಳನ್ನು ಒಳಗೊಂಡ ವಿಧಾನ ಪರಿಷತ್ ಕ್ಷೇತ್ರಕ್ಕೆ  ಬಿಜೆಪಿ ಅಭ್ಯರ್ಥಿಯಾಗಿರುವ ಕಿಶೋರ್ ಕುಮಾರ್ ಅವರು  ನಾಳೆ ( ಅ.18)  ಪೂರ್ವಾಹ್ನ 10 ಗಂಟೆಗೆ ಪೆರುವಾಜೆಯ ಜೆ.ಡಿ.ಅಡಿಟೋರಿಯಂ ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಿಹರ ಪಳ್ಳತ್ತಡ್ಕ : ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಭವ – ತೀರ್ಥಸ್ನಾನ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ಧಪರ್ವತದಿಂದ ಕೋಟಿ ತೀರ್ಥ ನದಿಯು ಹರಿಯುತ್ತಿದ್ದು, ಅದು ಶ್ರೀ ದೇವಳದ ಎದುರು ಭಾಗದಲ್ಲಿ ಸಂಗಮವಾಗಿ “ಅಘನಾಶಿನಿ” ಯಾಗಿ ಮುಂದಕ್ಕೆ ಹರಿಯುತ್ತದೆ. ಇಲ್ಲಿ ತುಲಾ ಸಂಕ್ರಮಣ ಅ.17 ರಂದು ಬೆಳಿಗ್ಗೆ 7:40ರ ಶುಭ ಮುಹೂರ್ತದಲ್ಲಿ ತೀರ್ಥೋದ್ಭವವಾಗಿದ್ದು, ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್...

ಸುಳ್ಯ ಅದ್ದೂರಿ ದಸರಾ ಮೆರವಣಿಗೆಗೆ ಚಾಲನೆ

ಸುಳ್ಯದಲ್ಲಿ ನಿರಂತರವಾಗಿ 9 ದಿನಗಳ ಕಾಲ ಪೂಜಿಸ್ಪಟ್ಟ ಶಾರದಾ ದೇವಿಯ ವಿಸರ್ಜನ ಮೆರವಣಿಗೆಗೆ ಇದೀಗ ಚಾಲನೆ ನೀಡಲಾಯಿತು.  ಸಂಸದ ಕ್ಯಾ ಬೃಜೇಶ್ ಚೌಟ , ಶಾಸಕಿ ಭಾಗೀರಥಿ ಮುರುಳ್ಯ , ನಾರಾಯಣ ಕೇಕಡ್ಕ , ಕೆ ಗೋಕುಲ್ ದಾಸ್ , ಡಾ .ಲೀಲಾಧರ ಡಿವಿ , ಶಶಿಕಲಾ ನೀರಬಿದಿರೆ ಮತ್ತಿತರರು ಓಂಕಾರ ಧ್ವಜ ಹಾರಿಸುವ ಮೂಲಕ...

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಲೀಲಾ ದಾಮೋದರ್ ಆಯ್ಕೆ

ಅರಂತೋಡಿನಲ್ಲಿ ನ. 23 ರಂದು ನಡೆಯಲಿರುವ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ್ ಆಯ್ಕೆಯಾಗಿದ್ದಾರೆ. ಇಂದು ಕನ್ನಡ ಭವನದಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಸಮ್ಮೇಳನ ಸ್ವಾಗತ ಸಮಿತಿ ಮತ್ತು ಸಮ್ಮೇಳನದ ಪೂರ್ವಾಧ್ಯಕ್ಷರ ಸಭೆಯಲ್ಲಿ ಲೀಲಾ ದಾಮೋದರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ...

ಬಾಲಚಂದ್ರ ಕಳಗಿ ಕೊಲೆ ಪ್ರಕರಣ –  ಆರೋಪಿಗಳ ವಿರುದ್ದ ಆರೋಪ ಸಾಬೀತು !

ಬಿಜೆಪಿ ಮುಖಂಡ ಸಂಪಾಜೆಯ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ತೀರ್ಪು ನಿನ್ನೆ ಪ್ತಕಟವಾಗಿದ್ದು, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯವು ಆದೇಶಿಸಿದೆ. ಕಳಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಹರಿಪ್ರಸಾದ್ ಪಿ ಕೆ ಯಾನೆ ಮಣಿ ಹಾಗೂ ಜಯನ್ ಕೆ ಇವರನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣವನ್ನು ದಿನಾಂಕ 19-10-2024 ರಂದು ನ್ಯಾಯಾಲಯ ಪ್ರಕಟಿಸಲಿದೆ...
Loading posts...

All posts loaded

No more posts

error: Content is protected !!