ಕರಿಮಣಿ ತಾಳಿ ಬಿದ್ದು ಹೋಗಿರುತ್ತದೆ

ಸುಳ್ಯದ ಕಟ್ಟೆಕಾರ್ ಹಾಗೂ ಕೆರೆಮೂಲೆ ರಸ್ತೆಯ ಆಸುಪಾಸಿನಲ್ಲಿ ಕರಿಮಣಿ ತಾಳಿ ಸರ ಬಿದ್ದು ಹೋಗಿರುತ್ತದೆ. ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಲು ಮನವಿ ಮಾಡಿದ್ದಾರೆ. ಈ ನಂಬರ್ ಗೆ ಕರೆ ಮಾಡಿ 9632489204

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಸ್ನಾತಕೋತರ ವಿಭಾಗದಲ್ಲಿ ರಾಜೀವ್ ಗಾಂಧಿ  ವಿಶ್ವವಿದ್ಯಾಲಯದಿಂದ ಮೂರು ರ‌್ಯಾಂಕ್

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇವರು ಮಾರ್ಚ್ -2025 ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ/ಎಂ.ಎಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತರ ವಿಭಾಗದ ಮೂರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ರ‌್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಗದ ತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಅವಿನಾಶ್ ಕೆ...
Ad Widget

ಕೊಲ್ಲಮೊಗ್ರು : ಏ.30 ರಿಂದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವ

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ಏ.30 ರಿಂದ ಮೇ.01 ರವರೆಗೆ ನಡೆಯಲಿದ್ದು, ಏ.30 ರಂದು ಭಂಢಾರ ಬರುವುದು ಹಾಗೂ ಮೇ.01 ರಂದು ನೇಮ ನಡಾವಳಿ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಆರಂತೋಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಿರಂತರ 71ನೇ ತಿಂಗಳ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಅಭಿಯಾನ ದ ಅಂಗವಾಗಿ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆಯ ನಿರಂತರ 71 ತಿಂಗಳ ಕಾರ್ಯಕ್ರಮ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ದಿನಾಂಕ 27.4.2025ನೇ ಆದಿತ್ಯವಾರ ದಂದು ಬೆಳಿಗ್ಗೆ 7.30ರಿಂದ 9.30ರ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಸದಸ್ಯರಲ್ಲದೆ ಗ್ರಾಮ ಪಂಚಾಯತ್...

ಕೆ.ಎಂ.ಎಫ್. ಚುನಾವಣೆ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಗೆಲುವು

ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್.) ಚುನಾವಣೆ ಇಂದು ನಡೆದು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಜಯಗಳಿಸಿದ್ದಾರೆ. ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್. ಬಿ.‌ಜಯರಾಮ ರೈ 190, ಭರತ್ ನೆಕ್ರಾಜೆ 173, ಚಂದ್ರಶೇಖರ ರಾವ್‌ 169, ಹೆಚ್ ಪ್ರಭಾಕರ್ 157, ಸವಿತಾ ಎಸ್ ಶೆಟ್ಟಿ ಮತ ಪಡೆದು...

ಸುಳ್ಯದ ಓಡಬಾಯಿನಲ್ಲಿ ಶುಭಾರಂಭಗೊಂಡ ಟೊಯೋಟಾ ಶೋರೂಂ – ಉದ್ಘಾಟನೆ ನೆರವೇರಿಸಿದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್

ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್ , ಗ್ರಾಹಕರಾದ ಶಾಫಿ ಬೊಳುಬೈಲು, ನಿವೃತ್ತ ರೇಂಜರ್ ರಾಧಾಕೃಷ್ಣ ಕುರುಂಜಿಗುಡ್ಡೆ, ಹಾಜಿ ಇಬ್ರಾಹಿಂ...

ಕಾಶ್ಮೀರದಲ್ಲಿನ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಆಲೆಟ್ಟಿ ಕಾಂಗ್ರೆಸ್ ನಿಂದ ಮೊಂಬತ್ತಿ ಉರಿಸುವ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮ ಕಾಂಗ್ರೆಸ್ ವತಿಯಿಂದ ನಾಗಪಟ್ಟಣ ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಮೊಂಬತ್ತಿ ಉರಿಸುವ ಮೂಲಕ ಮಾಡಲಾಯಿತು.  . ಈ ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂ...

ಎ.25 ರಂದು ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ **ಮನಸ್ಸು - ಮನುಷ್ಯನ ವ್ಯಕ್ತಿತ್ವದ ತಳಹದಿ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 25-04-2025 ರ ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ...

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ದಿನಾಂಕ 21/04/2025ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ...

ಅರಂತೋಡು : ಜಮ್ಮುಕಾಶ್ಮೀರದ ಪಹಲ್ಗಾಂವ್ ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ

ಜಮ್ಮು ಕಾಶ್ಮೀರದ ಪಹಲ್ಗಾಂವ್  ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎ. 23 ರಂದು  ಪೂರ್ವಾಹ್ನ 11.00 ರಿಂದ 12.00 ಗಂಟೆಯ ತನಕ ಎಲ್ಲಾ ವ್ಯಾಪಾರ ವ್ಯವಹಾರ ಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ನಡೆಸಿದರು. ಹಾಗೂ ಅರಂತೋಡು ರಿಕ್ಷಾ ನಿಲ್ದಾಣ ದ ಬಳಿ ಸೇರಿ ಪ್ರತಿಭಟನೆ ನಡೆಸಲಾಯಿತು....
Loading posts...

All posts loaded

No more posts

error: Content is protected !!