ಹತ್ಯಾಕಾಂಡದಲ್ಲಿ ಬಲಿಯಾದ ಪ್ರವಾಸಿಗರಿಗೆ ಅಮ್ಮನ್ ಸೊಸೈಟಿ ವತಿಯಿಂದ ಶ್ರದ್ಧಾಂಜಲಿ

ಕಲ್ಲುಗುಂಡಿಯ ಶ್ರೀ ಅಮ್ಮನ್ ಕ್ರೆಡಿಟ್ ಕೋ-ಓೕಪರೇಟಿವ್ ಸೊಸೈಟಿ ವತಿಯಿಂದ ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡ ದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಿಸಿದರು.‌ನಿವೃತ್ತ ಯೋದ ನವೀನ್ ಸಂಪಾಜೆ ಆಗಮಿಸಿ ತಮ್ಮ ಸೇವಾ ಅನುಭವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಜ್ಞಾನದೀಪದಲ್ಲಿ ಪರೀಕ್ಷೆ -2ರ ಸಿದ್ಧತಾ ತರಗತಿ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪರೀಕ್ಷೆ 2ರ ಸಿದ್ಧತಾ ತರಗತಿಗಳು ಮೇ.5ರಿಂದ ಆರಂಭಗೊಳ್ಳಲಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಾ ವಿಷಯಗಳಿಗೆ ಅನುಭವಿ ಶಿಕ್ಷಕರಿಂದ ತರಗತಿ ನಡೆಯಲಿದೆ. ಇಲ್ಲಿ 2024-25ನೇ ಸಾಲಿನಲ್ಲಿ ದೈನಂದಿನ ಟ್ಯೂಷನ್ ತರಗತಿಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಎಸ್ ಎಸ್...
Ad Widget

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮೂವರು ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಗೆ ಆಯ್ಕೆ

8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುವ ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಮರಮೂಡ್ನೂರು ಗ್ರಾಮದ ಕುಂಟಿಕಾನ ಮನೆ ಸತೀಶ್ ಆಚಾರ್ಯ ಮತ್ತು ಪುಣ್ಯ ದಂಪತಿಗಳ ಪುತ್ರಿ ವಿನಮ್ರ ಕೆ. ಎಸ್., ಕುಂಟಿಕಾನ ಮನೆ ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರ ಅಕ್ಷಯ್ ಕೆ.ಸಿ., ಕುಕ್ಕುಜಡ್ಕ ಮನೆ ರಾಘವ ಆಚಾರ್ಯ...

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ. 90.32% ಫಲಿತಾಂಶ

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಗೆ ಶೇ. 90.32% ಫಲಿತಾಂಶ ದಾಖಲಾಗಿದೆ. ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.ಕುಕ್ಕುಜಡ್ಕದ ರಾಘವ ಕೆ ಮತ್ತು ಸುಶೀಲ ಪಿ ದಂಪತಿಯ ಪುತ್ರಿ ಗೌತಮಿ ಆರ್ ಕೆ(575), ಕುಕ್ಕುಜಡ್ಕದ ಕೇನಡ್ಕ ನಾರಾಯಣ ಪಾಟಾಳಿ ಮತ್ತು ನಳಿನಾಕ್ಷಿ ಎಸ್ ದಂಪತಿಯ ಪುತ್ರಿ ಶರಣ್ಯ ಕೆ ಎನ್...

ಅಂಗ ವೈಕಲ್ಯದ ನಡುವೆ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ತಶ್ವಿನ್

ಅಂಗ ವೈಕಲ್ಯದ ನಡುವೆ ಎಸ್.ಎಸ್.ಎಲ್.ಸಿ. ಯಲ್ಲಿ ತಶ್ವಿನ್ ಉತ್ತಮ ಸಾಧನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಕಿನ್ನಿಗೋಳಿಯ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಶ್ವಿನ್ ಎಸ್.ಎಸ್.ಎಲ್.ಸಿ.ಯಲ್ಲಿ 606 ಅಂಕ ಪಡೆದಿದ್ದಾನೆ. ತಶ್ವಿನ್ ಗೆ ಕಾಲಿನ ಸಮಸ್ಯೆಯಿದ್ದು ಎಲ್ಲರಿಗಿಂತ ಕಡಿಮೆ ಎತ್ತರವಿದ್ದರೂ ಉತ್ತಮ ಸಾಧನೆಯ ಮೂಲಕ ಎತ್ತರಕ್ಕೇರಿದ್ದಾನೆ. ಈತ ನಾಲ್ಕೂರು ಗ್ರಾಮದ ಕುಕ್ಕುಜೆ...

ಎಸ್ಸೆಸ್ಸೆಲ್ಸಿ ಫಲಿತಾಂಶ: ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಉತ್ತಮ್.ಕೆ ರಾಜ್ಯಕ್ಕೆ 10ನೇ ರ‌್ಯಾಂಕ್

2024-25 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗಿದ್ದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಉತ್ತಮ್.ಕೆ 616 ಅಂಕ ಗಳಿಸಿ ರಾಜ್ಯಕ್ಕೆ 10ನೇ ರ‌್ಯಾಂಕ್ ಗಳಿಸಿದ್ದಾರೆ. ಒಟ್ಟು 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 14 ಡಿಸ್ಟಿಂಕ್ಷನ್, 34 ಪ್ರಥಮ ದರ್ಜೆ,13 ದ್ವಿತೀಯ ದರ್ಜೆ ಹಾಗೂ 08 ತೃತೀಯ ದರ್ಜೆಯೊಂದಿಗೆ 69 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ 95.83%...

ಎಸ್ಸೆಸ್ಸೆಲ್ಸಿ ಫಲಿತಾಂಶ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಪ್ರೌಢಶಾಲಾ ವಿಭಾಗ 78% ಫಲಿತಾಂಶ

2024-25 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು 78% ಫಲಿತಾಂಶ ದಾಖಲಾಗಿದೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದಿಂದ ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 7 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಅನ್ವಿತ್. ಎಂ.ವಿ 565, ಕೃತಿಕಾ 562,ಬೃಂದಾ ಎಂ.ವಿ...

ಮಂಗಳೂರು : ಹಿಂದೂ ಕಾರ್ಯಕರ್ತನ ಕೊಲೆ – ಸಂಘಟನೆಗಳಿಂದ ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ – ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರಿನ ಬಜಪೆ ಸಮೀಪ ಮೆ.01 ರಂದು ರಾತ್ರಿ ನಡೆದ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು (ಮೇ 2 ರಂದು) ಬಂದ್ ಗೆ ಕರೆ ನೀಡಿದೆ. ಈ ಬಗ್ಗೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ...

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

ನಾಳೆ ಬೆಳಗ್ಗೆ 11:30 ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಚಿವ ಮಧು ಬಂಗಾರಪ್ಪ ಅವರು ನಾಳೆ ಬೆಳಗ್ಗೆ 11:30 ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಫಲಿತಾಂಶ ಪ್ರಕಟವಾದ ತಕ್ಷಣ, ಫಲಿತಾಂಶವನ್ನು karresults.nic.in ಈ ಲಿಂಕ್ ಮೂಲಕ ವಿಕ್ಷೀಸಬಹುದು.

ಹರಿಹರ ಪಳ್ಳತ್ತಡ್ಕ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೃಹತ್ ಪಂಜಿನ ಮೆರವಣಿಗೆ

ಪಾಕಿಸ್ತಾನ ತನ್ನ ನರಿ ಬುದ್ಧಿ ಬಿಟ್ಟು ಬದುಕಲು ಕಲಿಯದೇ ಇದ್ದರೆ ಏಟು ತಿನ್ನಲು ತಯಾರಾಗಬೇಕಾದೀತು : ಪದ್ಮಕುಮಾರ್ ಗುಂಡಡ್ಕ ಪಾಕಿಸ್ತಾನ ಮತ್ತೆ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿ ತಪ್ಪು ಮಾಡಿದೆ : ಕುಸುಮಾಧರ ಎ.ಟಿ. ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು...
Loading posts...

All posts loaded

No more posts

error: Content is protected !!