ಕುಲ್ಕುಂದ : ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಗೋಪೂಜೆ

ಸುಬ್ರಹ್ಮಣ್ಯ ನ.25: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯಿಂದ ದೇವಸ್ಥಾನದ ಪುಂಗನೂರು ಗೋವುಗಳನ್ನು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತಂದು ಬಸವೇಶ್ವರ ದೇವರಿಗೆ ವಿಶೇಷವಾಗಿ ಒಂದು ದಿವಸದ ಅನ್ನದಾನ ಸಹಿತ ಎಲ್ಲಾ ಸೇವೆಯನ್ನು ನೆರವೇರಿಸುವುದರೊಂದಿಗೆ ಗೋಪೂಜೆಯನ್ನು ನಡೆಸಲಾಯಿತು. ಈ ಮುಖಾಂತರ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬಸವೇಶ್ವರ ದೇವಸ್ಥಾನಕ್ಕೂ ಇರುವ ಸಂಬಂಧಗಳು ಮತ್ತು ಜಾನುವಾರು ಜಾತ್ರೆಯ ನೆನಪು ಮತ್ತೆ ಮರುಕಳಿಸುವಂತೆ ಮಾಡಿತು.

. . . . . . . . .

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ , ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಪ್ರತಿನಿಧಿಗಳು, ಬಸವೇಶ್ವರ ದೇವಸ್ಥಾನದ ಅರ್ಚಕರು, ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಊರಿನ ಭಗವದ್ ಭಕ್ತರು ಪಾಲ್ಗೊಂಡಿದ್ದರು.

. . . . . . .

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಜಾನುವಾರು ಜಾತ್ರೆಯನ್ನು ಪುನರಾರಂಭಿಸಲು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading