ಕುಲ್ಕುಂದ : ಶ್ರೀ ಶೃಂಗೇರಿ ಶಾರದಾ ಪೀಠ ಧರ್ಮಾಭ್ಯುದಯ ಧರ್ಮಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭ ; “ನಮ್ಮ ಸಂಸ್ಕೃತಿಯನ್ನು ಅರಿತುಕೊಂಡರೆ ಭವ್ಯ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” : ಬಾಲಕೃಷ್ಣ ಬೋರ್ಕರ್

ಸುಬ್ರಹ್ಮಣ್ಯ : “ಸಂಸ್ಕಾರಯುತ ಧಾರ್ಮಿಕ ಶಿಕ್ಷಣವನ್ನು ಒಂದರಿಂದ ಒಂಬತ್ತನೇ ತರಗತಿಯ ಹಿಂದು ಮಕ್ಕಳಿಗೆ ಶಾರದಾ ಪೀಠ ಧರ್ಮಾಭ್ಯುದಯ ಧರ್ಮಶಿಕ್ಷಣ ನೀಡುತ್ತಿದೆ. ವೇದಗಳು, ಉಪನಿಷತ್ತುಗಳು, ಪುರಾಣಗಳು, ಆಚಾರ-ವಿಚಾರ, ನಮ್ಮ ಕೈಂಕಾರ್ಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಚಿಕ್ಕ ಮಕ್ಕಳಿಗೆ ದಾರೆ ಎರೆಯುವ ಮುಖಾಂತರ, ಜೊತೆಗೆ ಸನಾತನ ಸಂಸ್ಕೃತಿಯ ಅರಿವನ್ನು ಮೂಡಿಸುವ ಕಾರ್ಯಕ್ರಮದಲ್ಲಿ ನಾವು ತೊಡಗಿಕೊಂಡಿದ್ದೇವೆ. ಸಮಾಜದಲ್ಲಿ ನಡೆಯುವ ದುಷ್ಪರಿಣಾಮಗಳ...

“ಶಿಷ್ಟಾಚಾರ ಪಾಲನೆ ಶಾಸಕರಿಗೂ ಅನ್ವಯಿಸುತ್ತದೆ; ಆತ್ಮಾವಲೋಕನ ಮಾಡಿಕೊಳ್ಳಲಿ” : ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸವಾಲು

ಸುಳ್ಯ: "ಚುನಾಯಿತರಲ್ಲದವರು ಗುದ್ದಲಿಪೂಜೆ ಮಾಡಬಾರದು, ಅದು ಶಾಸಕರ ಹಕ್ಕು ಎಂಬುದಾದರೆ ಶಾಸಕರು ಗುದ್ದಲಿಪೂಜೆ ನಡೆಸುವಾಗ ಸರ್ಕಾರಿ ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸವಾಲು ಹಾಕಿದ್ದಾರೆ. "ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಅಭಿಯಂತರರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ನ ಆಡಳಿತಾಧಿಕಾರಿಗಳು ಶಂಕುಸ್ಥಾಪನೆ ಮತ್ತು ಗುದ್ದಲಿಪೂಜೆ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು....
Ad Widget

ವಳಲಂಬೆಯಲ್ಲಿ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸಮಿತಿಯ ದಶಮಾನೋತ್ಸವ – ಸನ್ಮಾನ

ವಳಲಂಬೆ : ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸಮಿತಿ ವಳಲಂಬೆ ಇದರ ದಶಮಾನೋತ್ಸವ ಕಾರ್ಯಕ್ರಮ ನ.22ರಂದು ನಡೆಯಿತು. ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕೇಶವ ಹೊಸೊಳಿಕೆ ವಹಿಸಿದ್ದರು. ಅತಿಥಿಗಳಾಗಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ...

ಕೆ-ಸೆಟ್ ಪರೀಕ್ಷೆಯಲ್ಲಿ ಪದ್ಮಕುಮಾರ್ ಗುಂಡಡ್ಕ ಉತ್ತೀರ್ಣ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವತಿಯಿಂದ ಅಕ್ಟೋಬರ್ 11ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ(ಕೆ-ಸೆಟ್) ರಾಜ್ಯಶಾಸ್ತ್ರ ವಿಭಾಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಗುಂಡಡ್ಕ ಅವರು ಉತ್ತೀರ್ಣರಾಗಿದ್ದಾರೆ. ಇವರು ಕಡಬ ತಾಲೂಕಿನ ಐನೆಕಿದು ಗ್ರಾಮದ ಜಿ.ಕೆ ರಾಮ ಹಾಗೂ ಶ್ರೀಮತಿ ರಾಜಮ್ಮ ದಂಪತಿಯ ಪುತ್ರ. (ವರದಿ...

ದಕ್ಷಿಣ ಕನ್ನಡದ ಸಹಕಾರಿ ಸಂಸ್ಥೆಗಳು ನಷ್ಟ ಕಾಣದೆ ಮಾದರಿಯಾಗಿ ಬೆಳೆದಿವೆ: ಡಾ. ಕೆ.ವಿ. ಚಿದಾನಂದ – ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ‘ರಜತ ಸಂಭ್ರಮ’ ಉದ್ಘಾಟನೆ

ವರದಿ : ಸುದೀಪ್ ರಾಜ್ ಮುಳ್ಯ ಸುಳ್ಯ: ಪಂಚವಾರ್ಷಿಕ ಯೋಜನೆಗಳ ಬಳಿಕ ದೇಶದಲ್ಲಿ ಸಹಕಾರಿ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿ ಹೊಂದಿದ್ದು, ಕೃಷಿ, ಹೈನುಗಾರಿಕೆ ಹಾಗೂ ಉದ್ಯಮ ಕ್ಷೇತ್ರಗಳ ಪ್ರಗತಿಗೆ ಸಹಕಾರಿ ಸಂಘಗಳು ಪ್ರಮುಖ ಕಾರಣವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸರ್ಕಾರದ ಹಸ್ತಕ್ಷೇಪವಿಲ್ಲದೆ, ನಷ್ಟ ಕಾಣದೆ ಅತ್ಯುತ್ತಮವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಕಾಡೆಮಿ...

ಗುತ್ತಿಗಾರಿಗೆ ಕಾಲಿಟ್ಟ ಡಿನೆಟ್ ಕೇಬಲ್ ನೆಟ್‌ವರ್ಕ್ – ದರ ಸಮರ ಆರಂಭ : ಕಡಿಮೆ ದರದಲ್ಲಿ ಸೇವೆ ನೀಡಲು ಮುಂದಾದ ಇತರ ನೆಟ್‌ವರ್ಕ್‌ಗಳು – ಗ್ರಾಹಕರಿಗೆ ಸಂತಸ

ಗುತ್ತಿಗಾರು : ಗುತ್ತಿಗಾರು, ವಳಲಂಬೆ, ಎಲಿಮಲೆ ಹಾಗೂ ಸೇವಾಜೆ ಭಾಗಗಳಲ್ಲಿ ಕೇಬಲ್ ನೆಟ್‌ವರ್ಕ್ ಸೇವೆಯಲ್ಲಿ ಇದೀಗ ಹೊಸ ಪೈಪೋಟಿ ಆರಂಭವಾಗಿದೆ. ಈ ಭಾಗಕ್ಕೆ ಡಿನೆಟ್ ಕೇಬಲ್ ನೆಟ್‌ವರ್ಕ್ ಪ್ರವೇಶಿಸುತ್ತಿದ್ದಂತೆಯೇ ಕೇಬಲ್ ಸೇವಾ ವಲಯದಲ್ಲಿ ದರ ಸಮರ ಶುರುವಾಗಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವ ನಿರೀಕ್ಷೆ ಮೂಡಿದೆ.ಈ ಹಿಂದೆ ಈ ಭಾಗದಲ್ಲಿ ಸೇವೆ ನೀಡುತ್ತಿದ್ದ ಕೇಬಲ್...

ಜೇನು ಉತ್ಪನ್ನಗಳ ಪ್ರಚಾರ ವಾಹನಕ್ಕೆ ಕ್ಯಾ. ಬ್ರಿಜೇಶ್ ಚೌಟ ಮೆಚ್ಚುಗೆ

ಮಂಗಳೂರು : ಕರಾವಳಿ ಮೈದಾನದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಘಾಟನೆಗೊಂಡ ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ, ಪುತ್ತೂರು ಇದರ ಜೇನು ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಸಿದ್ಧಪಡಿಸಲಾದ ನೂತನ ವಾಹನವನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಪರಿಶೀಲಿಸಿದರು. ವಾಹನದ ವಿನ್ಯಾಸ, ಪ್ರಚಾರ ವ್ಯವಸ್ಥೆ ಹಾಗೂ ಜೇನು ಉತ್ಪನ್ನಗಳ...

ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಹರೀಶ್ ಪೂಂಜ ಭೇಟಿ – ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ

ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ, ಕುಟುಂಬದ ಸದಸ್ಯರ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ನರಸಿಂಹ ಮಾಣಿ ಅವರ ಗಡಿಪಾರು ಕ್ರಮದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಹರೀಶ್ ಪೂಂಜ ಅವರು ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ, ಅವರ...

ಗುತ್ತಿಗಾರಿಗೆ ಕಾಲಿಟ್ಟ ಡಿನೆಟ್ ಕೇಬಲ್ ನೆಟ್‌ವರ್ಕ್; ದರ ಸಮರ ಆರಂಭ

ಗುತ್ತಿಗಾರು: ಗುತ್ತಿಗಾರು, ವಳಲಂಬೆ, ಎಲಿಮಲೆ ಹಾಗೂ ಸೇವಾಜೆ ಭಾಗಗಳಲ್ಲಿ ಕೇಬಲ್ ನೆಟ್‌ವರ್ಕ್ ಸೇವೆಯಲ್ಲಿ ಇದೀಗ ಹೊಸ ಪೈಪೋಟಿ ಆರಂಭವಾಗಿದೆ. ಈ ಭಾಗಕ್ಕೆ ಡಿನೆಟ್ ಕೇಬಲ್ ನೆಟ್‌ವರ್ಕ್ ಪ್ರವೇಶಿಸುತ್ತಿದ್ದಂತೆಯೇ ಕೇಬಲ್ ಸೇವಾ ವಲಯದಲ್ಲಿ ದರ ಸಮರ ಶುರುವಾಗಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವ ನಿರೀಕ್ಷೆ ಮೂಡಿದೆ. ಈ ಹಿಂದೆ ಈ ಭಾಗದಲ್ಲಿ ಸೇವೆ ನೀಡುತ್ತಿದ್ದ ಕೇಬಲ್...

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ರೋಟರಿ ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

ಸುಳ್ಯ: ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ದಿನಾಂಕ 21-11-2026ರಂದು ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಳ್ಯದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸೃಷ್ಟಿ ಕೆ.ಎಸ್. ಅವರು ಹ್ಯಾಮರ್ ಥ್ರೋ (Hammer Throw) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
Loading posts...

All posts loaded

No more posts

error: Content is protected !!