- Wednesday
- November 25th, 2026
ಸುಬ್ರಹ್ಮಣ್ಯ ನ.25: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯಿಂದ ದೇವಸ್ಥಾನದ ಪುಂಗನೂರು ಗೋವುಗಳನ್ನು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತಂದು ಬಸವೇಶ್ವರ ದೇವರಿಗೆ ವಿಶೇಷವಾಗಿ ಒಂದು ದಿವಸದ ಅನ್ನದಾನ ಸಹಿತ ಎಲ್ಲಾ ಸೇವೆಯನ್ನು ನೆರವೇರಿಸುವುದರೊಂದಿಗೆ ಗೋಪೂಜೆಯನ್ನು ನಡೆಸಲಾಯಿತು. ಈ ಮುಖಾಂತರ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬಸವೇಶ್ವರ ದೇವಸ್ಥಾನಕ್ಕೂ ಇರುವ ಸಂಬಂಧಗಳು ಮತ್ತು ಜಾನುವಾರು ಜಾತ್ರೆಯ ನೆನಪು ಮತ್ತೆ...
ನ.22 ಆದಿತ್ಯವಾರ ದಾಸನಮಜಲು ಪಾಟಾಜೆ ಹಾಗೂ ಉಪ್ಪಂಗಳ ಬೂಡು ಸ್ಥಳಿಯರಿಂದ ರಸ್ತೆಯನ್ನು ಸ್ವಚ್ಚಗೊಳಿಸಲಾಯಿತು. ಬೂಡಿನಿಂದ ಪಾಟಾಜೆ ಶಾಲೆಗೆ ತೆರಳುವ ರಸ್ತೆಯ ಬದಿಗಳಲ್ಲಿ ಹುಲ್ಲು ಕಾಡು ಪೊದೆಗಳು ಬೆಳೆದು ರಸ್ತೆ ಸಂಚಾರಕ್ಕೆ ಶಾಲಾ ಮಕ್ಕಳಿಗೆ ವಾಹನ ಸವರರಿಗೆ ಮತ್ತು ಪ್ರಯಾಣಿಕರಿಗೆ ಅಪಾಯಕಾರಿಯಾಗಿದ್ದು, ಇದನ್ನು ಮನಗಂಡ ಪಾಟಾಜೆ ದಾಸನಮಜಲು ಉಪ್ಪಂಗಳದ ಸ್ಥಳೀಯರು ಒಟ್ಟಾಗಿ ಸ್ವಇಚ್ಚೆಯಿಂದ ಸಮಾಜಕ್ಕೆ ಮಾದರಿಯಾಗುವಂತೆ ಶ್ರಮಿಸಿದರು.
ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೋಟೆಲ್ ಆವಂತಿ ಕೆಫೆಯಲ್ಲಿ ದೀಪಾವಳಿ ಪ್ರಯುಕ್ತ ನ. 22ರಂದು ಲಕ್ಷ್ಮೀ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಹೋಟೆಲ್ ಮಾಲಕ ಕಿಶನ್ ಬಿ. ದಂಪತಿಗಳು, ಕುಟುಂಬಸ್ಥರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಧ್ಯಾಹ್ನ ಸಾರ್ವಜನಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆ ದಿನಾಂಕ ನ.21 ಶನಿವಾರದಂದು ತುಳಸಿ ಹಬ್ಬದ ದಿನದಂದು ಸ್ಥಳ ಸಾನಿಧ್ಯ ದೈವಗಳಾದ ಮೊರ್ಗೇರ್ಕಳ ದೈವ, ಜಾಗದ ಪಂಜುರ್ಲಿ, ಗುಳಿಗ ಮತ್ತು ಸ್ವಾಮಿ ಕೊರಗಜ್ಜ ದೈವಕ್ಕೆ ಪರ್ಬತಂಬಿಲ ಸೇವೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಭಕ್ತಾದಿಗಳು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾದರು.
ಬೆಳ್ಳಾರೆ ಕೆಳಗಿನಪೇಟೆಯ ಶ್ರೀ ಕೃಷ್ಣ ಕಾಂಪ್ಲೆಕ್ಸಿನಲ್ಲಿ ಲೋಹಿತ್ ರೈ ಕಾವಿನಮೂಲೆ ಮಾಲಕತ್ವದ ಹಿಮಾನ್ಶ್ ಅಟೋ ವರ್ಕ್ಸ್ ನ.26 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ. (ವರದಿ : ಎಂ. ಎ. ಮುಸ್ತಫಾ ಬೆಳ್ಳಾರೆ)
ಬೆಳ್ಳಾರೆ : 2026-27ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ವಕ್ಫ್ ಸಂಸ್ಥೆಗಳ ದುರಸ್ತಿ ಮತ್ತು ಜೀರ್ಣೋದ್ಧಾರ, ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಕ್ಫ್ ಇಲಾಖೆ ಅನುದಾನ ಮಂಜೂರು ಮಾಡಿದ್ದು, ಇದರಂತೆ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ.20 ಲಕ್ಷ ಅನುದಾನ ಮಂಜೂರಾಗಿದೆ. ಈ ಅನುದಾನ ಮಂಜೂರಾಗಲು ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಕೊಡಗು ಜಿಲ್ಲಾ...
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿವೆ. ಜಾತ್ರೆಯ ಸಂದರ್ಭದಲ್ಲಿ ಎಳೆಯುವ ಬ್ರಹ್ಮರಥ ಹಾಗೂ ಪಂಚಮಿ ರಥಗಳ ನಿರ್ಮಾಣ ಕಾರ್ಯಕ್ಕೆ ಸಾಂಪ್ರದಾಯಿಕವಾಗಿ ಗೂಟ ಪೂಜಾ ಮುಹೂರ್ತ ನೆರವೇರಿಸಲಾಯಿತು. ಕಾರ್ತಿಕ ಹುಣ್ಣಿಮೆಯ ಶುಭದಿನದಂದು ದೇವಸ್ಥಾನದ ಸಂಪ್ರದಾಯದಂತೆ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಗೂಟ...
ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಪರಾಭವ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿಯಾದ ಡಿಸೆಂಬರ್ 05ರ ಶನಿವಾರದಿಂದ ಮಾರ್ಗಶಿರ ಶುದ್ಧ ದ್ವಾದಶಿಯಾದ ಡಿಸೆಂಬರ್ 21ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಪೂರ್ವಶಿಷ್ಟ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಯಲಿದೆ.ಜಾತ್ರೋತ್ಸವದ...
ಸುಬ್ರಹ್ಮಣ್ಯ ನವಂಬರ್ 24: ಪರ್ಯಾಯ ಚಿಕಿತ್ಸೆ ಮತ್ತು ಸಮಗ್ರ ಆರೋಗ್ಯ ಚಿಕಿತ್ಸೆಗಳು ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಡಾಕ್ಟರೇಟ್ ಪದವಿಯನ್ನು ಶ್ರದ್ಧ ಲಲಿತ ರೈ ಅವರು ಪಡೆದಿರುತ್ತಾರೆ. ಇವರು ಪಂಜ ಸಮೀಪದ ಕೇನ್ಯದ ಸುದರ್ಶನ್ ಶೆಟ್ಟಿ ಹಾಗೂ ಲಲಿತ ರೈ ದಂಪತಿಯ ಪುತ್ರಿ.
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 25 ನವೆಂಬರ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ನವೆಂಬರ್ 25) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...
Loading posts...
All posts loaded
No more posts
