ಐವರ್ನಾಡು ; ತ್ಯಾಜ್ಯ ಎಸೆಯುತ್ತಿದ್ದ ವಾಹನ ತಡೆದು ಪಂಚಾಯತ್‌ಗೆ ಒಪ್ಪಿಸಿದ ಚರಣ್ ಬೇಂಗಮಲೆ

ಐವರ್ನಾಡು: ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಹಾಸನದ ನಿವಾಸಿಗಳನ್ನು ತ್ಯಾಜ್ಯ ತುಂಬಿದ್ದ ವಾಹನ ಸಮೇತ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿ. ಚಂದ್ರಲಿಂಗಂ ಅವರ ಪುತ್ರ ಚರಣ್ ಬೇಂಗಮಲೆ ಅವರು ಹಿಡಿದು ಗ್ರಾಮ ಪಂಚಾಯತ್‌ಗೆ ಒಪ್ಪಿಸಿದ ಘಟನೆ ನಡೆದಿದೆ.

. . . . . . . . .

ಬೇಂಗಮಲೆ ಪರಿಸರದಲ್ಲಿ ಹಾಸನದ ಜೀವನ್ ಎಂಬವರು ತ್ಯಾಜ್ಯ ಎಸೆಯುತ್ತಿದ್ದ ಸಂದರ್ಭದಲ್ಲಿ ಚರಣ್ ಅವರು ಅವರನ್ನು ವಾಹನ ಸಮೇತ ರೆಡ್‌ಹ್ಯಾಂಡ್ ಆಗಿ ತಡೆದು, ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಎಸೆದವರಿಗೆ ರೂ.7,000 ದಂಡ ವಿಧಿಸಿ, ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಿ ವಾಹನವನ್ನು ಬಿಡುಗಡೆ ಮಾಡಿದರು.

. . . . . . .

ತ್ಯಾಜ್ಯ ಎಸೆಯುತ್ತಿದ್ದವರನ್ನು ಹಿಡಿದು ಪಂಚಾಯತ್‌ಗೆ ಒಪ್ಪಿಸಿದ ಚರಣ್ ಬೇಂಗಮಲೆ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಿ ರೂ.500 ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಈ ಪ್ರಕರಣವನ್ನು ತಡೆದು ಇತ್ಯರ್ಥಪಡಿಸಲು ಸಹಕರಿಸಿದ ಬಾಂಜಿಕೋಡಿ ಹಾಗೂ ಬೇಂಗಮಲೆ ಪರಿಸರದ ಸಾರ್ವಜನಿಕರಿಗೂ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತ್ಯಾಜ್ಯ ಎಸೆಯುವ ಪ್ರಕರಣಗಳನ್ನು ಸಾರ್ವಜನಿಕರೇ ಗಮನಿಸಿ, ಅಂತಹವರನ್ನು ತಡೆದು ಪಂಚಾಯತ್‌ನ ಗಮನಕ್ಕೆ ತಂದು ಕ್ರಮಕ್ಕೆ ಆಗ್ರಹಿಸುವುದು ಸ್ವಚ್ಛತಾ ಜಾಗೃತಿಗೆ ಪ್ರೇರಣಾದಾಯಕವಾಗಿದ್ದು, ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತ್ ಅಭಿಪ್ರಾಯಪಟ್ಟಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading