ಸುಬ್ರಹ್ಮಣ್ಯ : ವಿವಾದಿತ ಜಾಗಗಳ ತೆರವು ಕಾರ್ಯ ಆರಂಭ..!

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಶ್ರೀನಿಕೇತನ ಕಟ್ಟಡ ಸೇರಿದಂತೆ ಕೆಲ ಜಾಗಗಳ ಕುರಿತ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಖಾಸಗಿಯವರ ನಡುವಿನ ಜಾಗದ ವಿವಾದ ಸುಪ್ರೀಂ ಮೆಟ್ಟಿಲೇರಿತ್ತು. ಈ ಸಂಬಂಧ ಖಾಸಗಿಯವರು ಸಲ್ಲಿಸಿದ್ದ ದಾವೆಯನ್ನು ಸುಪ್ರೀಂ ಇತ್ತೀಚೆಗೆ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಶ್ರೀನಿಕೇತನ ಕಟ್ಟಡದಲ್ಲಿರುವ ವಸತಿ ಕೊಠಡಿಗಳು, ಹೋಟೆಲ್, ಫ್ಯಾನ್ಸಿ ಸೇರಿದಂತೆ ವಿವಿಧ ಅಂಗಡಿಗಳ ತೆರವಿಗೆ ಸೆಪ್ಟೆಂಬರ್ 30ರ ಗಡುವು ನೀಡಲಾಗಿದೆ.

. . . . . . . . .

ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಅಂಗಡಿ ಮಾಲೀಕರು ತಮ್ಮ ಅಂಗಡಿಗಳಲ್ಲಿದ್ದ ಸಾಮಗ್ರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಕುಮಾರಧಾರೆಯಿಂದ ಮುಖ್ಯರಸ್ತೆ ಬದಿಯಲ್ಲಿರುವ ವಿವಾದಿತ ಜಾಗಗಳು ಹಾಗೂ ಆದಿ ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿರುವ ವಿವಾದಿತ ಕಟ್ಟಡಗಳನ್ನು ಕೂಡ ತೆರವುಗೊಳಿಸಲು ಶ್ರೀ ದೇವಳದಿಂದ ಸೂಚನೆ ನೀಡಲಾಗಿ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಕಟ್ಟಡವನ್ನು ತೆರವುಗೊಳಿಸುತ್ತಿರುವುದಾಗಿ ತಿಳಿದು ಬಂದಿದೆ.

. . . . . . .

ಇದೇ ಸಂದರ್ಭದಲ್ಲಿ, ದೇವಾಲಯಕ್ಕೆ ಸೇರಿದ ರಥಬೀದಿಯಲ್ಲಿರುವ ಸ್ಕಂದ ಲಾಡ್ಜ್ ಕಟ್ಟಡವನ್ನೂ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. “ಸ್ಕಂದ ಕಟ್ಟಡವು ನಾ ದುರಸ್ತಿಯಲ್ಲಿದ್ದು ಅಪಾಯದಂಚಿನಲ್ಲಿ ಇರುತ್ತದೆ ಹಾಗೂ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಕಾರಣ ಸ್ಕಂದ ಲಾಡ್ಜ್ ಕಟ್ಟಡವನ್ನು ತೆರವುಗೊಳಿಸಲಾಗುವುದು” ಎಂದು ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading