ಕುಕ್ಕೆ ಸುಬ್ರಹ್ಮಣ್ಯ : ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಅಮರ ಸುದ್ದಿ ವರದಿಗಾರರಾದ ಉಲ್ಲಾಸ್ ಕಜ್ಜೋಡಿಯವರಿಗೆ ಸನ್ಮಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸೆ.29ರಂದು ಎನ್.ಎಸ್.ಎಸ್ ದಿನಾಚರಣೆಯನ್ನು ಹಮ್ಮಿಕೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿಯ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಕುಶಾಲಪ್ಪ.ಎಸ್ ಇವರು ಮುಖ್ಯ ಅತಿಥಿಯಾಗಿ “ಎನ್.ಎಸ್.ಎಸ್ ನ ಮಹತ್ವ ಹಾಗೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿಯಾಗುತ್ತದೆ” ಎಂದು ಸ್ವಯಂಸೇವಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ದೇಹದ ಯಾವುದೇ ನ್ಯೂನತೆ ಮನುಷ್ಯ ಸಾಧನೆ ಹಾಗೂ ಮಾಡುವ ಕೆಲಸಕ್ಕೆ ಅಡ್ಡಿಯಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸುಳ್ಯ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಮತ್ತು ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಶ್ರೀಲತಾ ಕಮಿಲಾ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಸುಮಿತ್ರ ಸ್ವಾಗತಿಸಿ, ರೂಪಿಕಾ ವಂದಿಸಿದರು. ಕಾರ್ಯಕ್ರಮವನ್ನು ಸುಶ್ಮಿತಾ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading