ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನಿಂತಿಕಲ್ಲು ವಲಯ ಇವುಗಳ ಜಂಟಿ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಿಂತಿಕಲ್ಲು ವಲಯದ 7 ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ ಸೆ.20 ಭಾನುವಾರದಂದು ಕೇರ್ಪಡ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

. . . . . . . . .

ಸಭಾಧ್ಯಕ್ಷತೆಯನ್ನು ವಲಯದ ಒಕ್ಕೂಟದ ಅಧ್ಯಕ್ಷರಾದ ವಸಂತ ಗೌಡ ಕುಕ್ಕಯ್ಯಕೋಡಿಯವರು ವಹಿಸಿದ್ದರು. ಶ್ರೀ ಮಹಿಷಾಮರ್ದಿನಿ ದೇವಸ್ಥಾನ ಕೆರ್ಪಡ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕನಾಥ ರೈ ಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸುವುದರ ಮೂಲಕ ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು.

. . . . . . .

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ವಿಶ್ವನಾಥ ರೈ ಕಳಂಜರವರು ಗ್ರಾಮಾ ಅಭಿವೃದ್ಧಿ ಯೋಜನೆಯ ವಿಶೇಷ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರು ಯೋಜನೆಯ ಕಾರ್ಯಕ್ರಮ ಮತ್ತು ನಿಂತಿಕಲ್ಲು ವಲಯದ ಜನತೆ ಪಡೆದ ಸೌಲಭ್ಯಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ತಾಲೂಕಿನ ಅಧ್ಯಕ್ಷರಾದ ಶ್ರೀ ವೆಂಕಟಪ್ಪ ಗೌಡ ರವರು ಪೂಜ್ಯರ ಈ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾವು ತೊಡಗಿಸಿಕೊಳ್ಳುವಾಗ ಯಾವುದೇ ರಾಜಕೀಯ ಬರಬಾರದು. ಇದು ಸತ್ಯ ಧರ್ಮದ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ತುಳುವಿನಲ್ಲಿ ಮಾತನಾಡುತ್ತಾ ತುಳು ಭಾಷೆಯು ಅಧಿಕೃತ ರಾಜ್ಯದ ಎರಡನೇ ಭಾಷೆಯಾಗಿ ಘೋಷಣೆಯಾದ ಹಿನ್ನೆಲೆಯ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾಬೋದಿನಿ ಎಜುಕೇಶನ್ ಸೊಸೈಟಿ ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣ ರಾವ್ ಯು ರವರು. ಕ್ಷೇತ್ರದ ಕಾರ್ಯಕ್ರಮವು ಸಾಮಾನ್ಯ ಜನರಿಗೆ ಮತ್ತು ಗ್ರಾಮಕ್ಕೆ ಕೊಡುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ ಶುಭ ಹಾರೈಸಿದರು. ಶ್ರೀರಾಮ ಸೇವಾ ಟ್ರಸ್ಟ್ ಕಾಚಿಲ ಇದರ ಕಾರ್ಯದರ್ಶಿಗಳಾದ ಸಾಯಿ ಗಿರಿಧರರವರು ಕ್ಷೇತ್ರದ ಕಾರ್ಯಕ್ರಮ ಬಡ ಜನರಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಕೊಡುವ ಅಪಾರ ಕೊಡುಗೆ ಬಗ್ಗೆ ತಿಳಿಸಿದರು. ಶ್ರೀ ಸೀತಾ ರಾಮಾಂಜನೇಯ ಭಾರತಿ ಮಂದಿರ ಏನ್ ಮೂರು ಇದರ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ಜನಜಾಗೃತಿ ವೇದಿಕೆಯ ನಿಂತಿಕಲ್ಲು ವಲಯದ ಅಧ್ಯಕ್ಷರಾದ ವಿಶ್ವನಾಥ ಕಲ್ಲೆಂಬಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ನುಡಿಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿ ಶ್ರೀ ಸೀತಾ ರಾಮಾಂಜನೇಯ ಸೇವಾ ಪ್ರತಿಷ್ಠಾನ ಎಣ್ಮೂರು ಇದರ ಅಧ್ಯಕ್ಷರಾದ ರಘುನಾಥ ರೈ ಕಟ್ಟಬೀಡು, ಶ್ರೀರಾಮ ಸೇವಾ ಟ್ರಸ್ಟ್ ಕಾಚಿಲಾ ಇದರ ಅಧ್ಯಕ್ಷರಾದ ರಮೇಶ್ ತಿಪ್ಪಣ್ಣಕಜೆ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಇದರ ಅಧ್ಯಕ್ಷರಾದ ವಸಂತ ನಡುಬೈಲು ರವರು ಉಪಸ್ಥಿತರಿದ್ದರು.

ತಾಲೂಕಿನ ಯೋಜನಾಧಿಕಾರಿಗಳಾದ ಮಾಧವ ಗೌಡರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಕಾರ್ಯಕರ್ತರ ಶ್ರಮ ಒಕ್ಕೂಟದ ಪದಾಧಿಕಾರಿಗಳ ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿಸುತ್ತಾ ಶ್ರೀ ಶನೇಶ್ವರ ಪೂಜೆಯ ಮಹತ್ವದ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು ನವಜೀವನ ಸಮಿತಿಯ ಸದಸ್ಯರಾದ ದೈವ ಪಾತ್ರಿಗಳಾದ ಕುಣ್ಯ ಡೆಕ್ಕಳ, ಕುಣ್ಯ ಶೇರ ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.ವಲಯ ಮೇಲ್ವಿಚಾರಕಿ ಆದ ಶ್ರೀಮತಿ ಸವಿತಾ ಶೆಟ್ಟಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಸುಹಾಸ್ ರವರು ವರದಿ ಮಂಡಿಸಿದರು. ದಿನೇಶ್ ರವರು ಧನ್ಯವಾದ ಸಮರ್ಪಿಸಿದರು. ಪ್ರದೀಪ್ ಎಣ್ಮೂರು ರವರು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading