ಜೇಸಿಐ ಸುಳ್ಯ ಪಯಸ್ವಿನಿಯ ಅಶೋಕ್ ಚೂಂತಾರುರವರಿಗೆ ಪ್ರೇರಣಾ ಪ್ರಶಸ್ತಿ

ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ತರಬೇತಿ ಸಮ್ಮೇಳನದಲ್ಲಿ ಕೊಡಮಾಡುವ ಪ್ರೇರಣಾ-2026 ಪ್ರಶಸ್ತಿಯು ತರಬೇತಿ ಹಾಗೂ ಸದಸ್ಯರ ಅಭಿವೃದ್ಧಿಯಲ್ಲಿ ತಮ್ಮ ಸಂಸ್ಥೆಗೆ ಮಹತ್ವದ ಕೊಡುಗೆ ನೀಡಿದ ತರಬೇತುದಾರರನ್ನು ಗುರುತಿಸಿ ಗೌರವಿಸಲಾಗಿದ್ದು, ಜೇಸಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಘಟಕದ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರು, ಜೇಸಿಐ ಭಾರತ ವಲಯ 15ರ ಪೂರ್ವ ವಲಯಾದ್ಯಕ್ಷರೂ ಆದ ಜೇಸಿಐ ಪಿಪಿಪಿ ಅಶೋಕ್ ಚೂಂತಾರುರವರು ಇಂದು ಮಂಗಳೂರಿನ ಪಾಲೇಮಾರ್ ಕನ್ವರ್ಸನ್ ಸಭಾಂಗಣದಲ್ಲಿ ನಡೆದ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

. . . . . . . . .

ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಘಟಕಾಧ್ಯಕ್ಷೆ ಜೆ.ಎಪ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಪತ್ನಿ ಜೇಸಿ. ಶೋಭಾ ಚೂಂತಾರು, ಮಕ್ಕಳಾದ ಹಂಸಿಕಾ ಚೂಂತಾರು, ಮೋಂಟಡ್ಕ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading