ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಮಾಧ್ಯಮಕ್ಕೆ ಅವಕಾಶ ನಿರಾಕರಣೆ ; ಸಭೆಯಲ್ಲಿ ಗೊಂದಲ, ಸದಸ್ಯರ ಆಕ್ರೋಶ..!

ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಾಧ್ಯಮಕ್ಕೆ ಚಿತ್ರೀಕರಣ ಹಾಗೂ ವರದಿಗಾರಿಕೆಗೆ ಅವಕಾಶ ನಿರಾಕರಿಸಿದ ಘಟನೆ ಸೆಪ್ಟೆಂಬರ್ 20ರಂದು ನಡೆದಿದೆ. ಸಂಘದ ಮಹಾಸಭೆಯ ವರದಿ ಸಂಗ್ರಹ ಹಾಗೂ ಚಿತ್ರೀಕರಣಕ್ಕಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಯನ್ನು ಸಂಘದ ಆಡಳಿತ ಮಂಡಳಿಯು ತಡೆದು ಚಿತ್ರೀಕರಣಕ್ಕೆ ತಡೆಯೊಡ್ಡಲಾಗಿದೆ ಎಂದು ತಿಳಿದುಬಂದಿದ್ದು, ಆಡಳಿತ ಮಂಡಳಿಯ ಈ ಕ್ರಮಕ್ಕೆ ಸಭೆಯಲ್ಲಿದ್ದ ಕೆಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, “ಮಾಧ್ಯಮಕ್ಕೆ ಅವಕಾಶ ನೀಡಲೇಬೇಕು, ಇಲ್ಲದಿದ್ದರೆ ಮಹಾಸಭೆ ನಡೆಸಲು ಬಿಡುವುದಿಲ್ಲ” ಎಂದು ಕೆಲ ಸದಸ್ಯರು ಪಟ್ಟು ಹಿಡಿದಿರುವುದಾಗಿ ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಮಹಾಸಭೆಯ ಸಂದರ್ಭದಲ್ಲಿ ಕೆಲಕಾಲ ಚರ್ಚೆ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಹಕಾರಿ ಸಂಘದ ಮಹಾಸಭೆಯ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಆಡಳಿತ ಮಂಡಳಿ ಮುಂದಾಗಿದ್ದೇಕೆ ಎಂಬ ಪ್ರಶ್ನೆ ಹಾಗೂ ಅನುಮಾನಗಳು ಇದೀಗ ವ್ಯಕ್ತವಾಗಿವೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading