ಇಂದಿನ(ಸೆಪ್ಟೆಂಬರ್ 18) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಧಾರಣೆಯಲ್ಲಿ ಕೊಂಚ ಏರಿಕೆ ; ಅಡಿಕೆ, ಕಾಳುಮೆಣಸು ಹಾಗೂ ಕೊಬ್ಬರಿ ದರ ಯಥಾಸ್ಥಿತಿ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ದಿನಾಂಕ : 18 ಸೆಪ್ಟೆಂಬರ್ 2026
ವಾರ : ಶುಕ್ರವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 18) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 395 ರಿಂದ 475
ಹಳೆ ಅಡಿಕೆ : 390 ರಿಂದ 550
ಡಬಲ್ ಚೋಲ್ : 390 ರಿಂದ 550
ಫಟೋರಾ : 310 ರಿಂದ 360
ಉಳ್ಳಿ : 220 ರಿಂದ 245
ಕರಿಗೋಟು : 220 ರಿಂದ 245
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಸೆಪ್ಟೆಂಬರ್ 18) ಅಡಿಕೆ ಮಾರುಕಟ್ಟೆ ಧಾರಣೆ ನಿನ್ನೆಗೆ(ಸೆಪ್ಟೆಂಬರ್ 17) ಹೋಲಿಸಿದರೆ ಹೊಸ ಅಡಿಕೆಯ ಗರಿಷ್ಠ ದರ ಸ್ಥಿರವಾಗಿದ್ದರೂ ಆರಂಭಿಕ ದರದಲ್ಲಿ ₹5 ಇಳಿಕೆಯಾಗಿದೆ. ಉಳಿದಂತೆ ಫಟೋರಾ, ಉಳ್ಳಿ ಹಾಗೂ ಕರಿಗೋಟು ತಳಿಗಳ ಧಾರಣೆಯಲ್ಲಿ ಹಿನ್ನಡೆ ಕಂಡುಬಂದಿದೆ. ಆದರೆ ಹಳೆ ಅಡಿಕೆ ಮತ್ತು ಡಬಲ್ ಚೋಲ್ ದರಗಳು ನಿನ್ನೆಯ ಬಲಿಷ್ಠ ಮಟ್ಟದಲ್ಲೇ ಸ್ಥಿರವಾಗಿವೆ.
ಹಳೆ ಅಡಿಕೆ ಸ್ಥಿರ : ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಧಾರಣೆಗಳು ಪ್ರತಿ ಕೆಜಿಗೆ ಗರಿಷ್ಠ ₹550 ಹಾಗೂ ಹೊಸ ಅಡಿಕೆ ಗರಿಷ್ಠ ₹475 ರ ಬಲಿಷ್ಠ ಮಟ್ಟದಲ್ಲೇ ಮುಂದುವರಿದಿವೆ.
ಉಪ ಉತ್ಪನ್ನಗಳಲ್ಲಿ ಇಳಿಕೆ : ಉಳ್ಳಿ ದರ ಗರಿಷ್ಠ ₹245 ಕ್ಕೆ(₹5 ಇಳಿಕೆ) ಹಾಗೂ ಕರಿಗೋಟು ದರ ಗರಿಷ್ಠ ₹245 ಕ್ಕೆ(₹5 ಇಳಿಕೆ) ತಲುಪಿದ್ದು, ಫಟೋರಾ ಗರಿಷ್ಠ ದರದಲ್ಲೂ ₹5 ಇಳಿಕೆಯಾಗಿದೆ.
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 595 ರಿಂದ 690
ಹಸಿ ಕೊಕ್ಕೋ : 70 ರಿಂದ 100
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 135 ರಿಂದ 165
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಸೆಪ್ಟೆಂಬರ್ 18) ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ ನಿನ್ನೆಗೆ(ಸೆಪ್ಟೆಂಬರ್ 17) ಹೋಲಿಸಿದರೆ ಇಂದಿನ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ಸೇರಿದಂತೆ ಎಲ್ಲಾ ಪ್ರಮುಖ ಉತ್ಪನ್ನಗಳ ದರಗಳು ನಿನ್ನೆಯ ಬಲಿಷ್ಠ ಮಟ್ಟದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
₹165 ರಲ್ಲೇ ಕೊಬ್ಬರಿ ಸ್ಥಿರ : ಕೊಬ್ಬರಿ ಧಾರಣೆಯು ಪ್ರತಿ ಕೆಜಿಗೆ ₹135 ರಿಂದ ₹165 ರ ಬಲಿಷ್ಠ ಮಟ್ಟದಲ್ಲೇ ವಹಿವಾಟು ನಡೆಸುತ್ತಿದೆ.
₹690 ರ ಬಲಿಷ್ಠ ಮಟ್ಟದಲ್ಲಿ ಕಾಳುಮೆಣಸು : ಕಾಳುಮೆಣಸು ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಪ್ರತಿ ಕೆಜಿಗೆ ಗರಿಷ್ಠ ₹690 ರಂತೆ ಮಾರಾಟವಾಗುತ್ತಿದೆ.
ಕೊಕ್ಕೋ ದರ ಯಥಾಸ್ಥಿತಿ : ಹಸಿ ಕೊಕ್ಕೋ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಗರಿಷ್ಠ ₹320 ರ ನಿನ್ನೆಯ ದರದಲ್ಲೇ ಮಾರಾಟವಾಗುತ್ತಿದೆ.
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)

ರಬ್ಬರ್ ಧಾರಣೆ
ಗ್ರೇಡ್ : 270
ಲಾಟ್ : 255
ಸ್ಕ್ರ್ಯಾಪ್ ಪ್ರಥಮ ದರ್ಜೆ : 170
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 160
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಸೆಪ್ಟೆಂಬರ್ 18) ರಬ್ಬರ್ ಮಾರುಕಟ್ಟೆ ಧಾರಣೆ ನಿನ್ನೆಗೆ(ಸೆಪ್ಟೆಂಬರ್ 17) ಹೋಲಿಸಿದರೆ ಗ್ರೇಡ್ ರಬ್ಬರ್ ದರದಲ್ಲಿ ಪ್ರತಿ ಕೆಜಿಗೆ 50 ಪೈಸೆ(₹0.50) ಏರಿಕೆ ಕಂಡುಬಂದಿದೆ. ಉಳಿದಂತೆ ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ವಿಭಾಗಗಳ ದರಗಳು ಯಾವುದೇ ಬದಲಾವಣೆಯಿಲ್ಲದೆ ನಿನ್ನೆಯ ಬಲಿಷ್ಠ ಮಟ್ಟದಲ್ಲೇ ಸ್ಥಿರವಾಗಿವೆ.
₹270 ಕ್ಕೆ ಏರಿದ ಗ್ರೇಡ್ ರಬ್ಬರ್ : ಗ್ರೇಡ್ ರಬ್ಬರ್ ಧಾರಣೆಯು ಇಂದು ಪ್ರತಿ ಕೆಜಿಗೆ 50 ಪೈಸೆ ಹೆಚ್ಚಾಗಿ ₹270.00 ರಂತೆ ವಹಿವಾಟು ನಡೆಸುತ್ತಿದೆ.
₹255 ರಲ್ಲೇ ಲಾಟ್ ರಬ್ಬರ್ ಸ್ಥಿರ : ಲಾಟ್ ರಬ್ಬರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಪ್ರತಿ ಕೆಜಿಗೆ ₹255.00 ರ ಬಲಿಷ್ಠ ಮಟ್ಟದಲ್ಲೇ ಮುಂದುವರಿದಿದೆ.
ಸ್ಕ್ರ್ಯಾಪ್ ರಬ್ಬರ್ ದರ ಯಥಾಸ್ಥಿತಿ : ಸ್ಕ್ರ್ಯಾಪ್ ಪ್ರಥಮ ದರ್ಜೆ ₹170.00 ಹಾಗೂ ದ್ವಿತೀಯ ದರ್ಜೆ ₹160.00 ರ ದರದಲ್ಲೇ ಸ್ಥಿರವಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading