“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಆ.31)ದಿಂದ ಶನಿವಾರ(ಸೆ.05)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಸ್ಥಿರತೆ ಕಾಯ್ದುಕೊಂಡ ಅಡಿಕೆ, ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ದರ – ಇಳಿಕೆಯಾದ ರಬ್ಬರ್ ದರ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಆಗಸ್ಟ್ 31 ಸೋಮವಾರದಿಂದ ಸೆಪ್ಟೆಂಬರ್ 05 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ : ಮುಖ್ಯ ಅಡಿಕೆ ಹಾಗೂ ಉಪ ಉತ್ಪನ್ನಗಳಲ್ಲಿ ಸಂಪೂರ್ಣ ಸ್ಥಿರತೆ – ಉಳ್ಳಿ ಅಡಿಕೆಯ ದರದಲ್ಲಿ ಕೊಂಚ ಇಳಿಕೆ..!
ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಯ ಮುಖ್ಯ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳಾದ ಫಟೋರಾ ಮತ್ತು ಕರಿಗೋಟು ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಉಳ್ಳಿ ಅಡಿಕೆಯ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು.
1) ಹೊಸ ಅಡಿಕೆ : ಸೋಮವಾರದಂದು ಕನಿಷ್ಠ ₹400 ರಿಂದ ಗರಿಷ್ಠ ₹475 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)
2) ಹಳೆ ಅಡಿಕೆ ಹಾಗೂ ಡಬಲ್ ಚೋಲ್ : ಸೋಮವಾರದಂದು ಕನಿಷ್ಠ ₹390 ರಿಂದ ಗರಿಷ್ಠ ₹550 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)
3) ಫಟೋರಾ : ಸೋಮವಾರದಂದು ಕನಿಷ್ಠ ₹320 ರಿಂದ ಗರಿಷ್ಠ ₹365 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)
4) ಉಳ್ಳಿ : ಸೋಮವಾರದಂದು ಕನಿಷ್ಠ ₹245 ರಿಂದ ಗರಿಷ್ಠ ₹255 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹245 ರಿಂದ ಗರಿಷ್ಠ ₹250 ಕ್ಕೆ ಬಂದು ತಲುಪಿತ್ತು. (ಗರಿಷ್ಠ ದರದಲ್ಲಿ ₹5 ಇಳಿಕೆ)
5) ಕರಿಗೋಟು : ಸೋಮವಾರದಂದು ಕನಿಷ್ಠ ₹225 ರಿಂದ ಗರಿಷ್ಠ ₹255 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)

ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ : ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರದ ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
1) ಕಾಳುಮೆಣಸು : ಸೋಮವಾರದಂದು ಕನಿಷ್ಠ ₹595 ರಿಂದ ಗರಿಷ್ಠ ₹690 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)
2) ಕೊಬ್ಬರಿ : ಸೋಮವಾರದಂದು ಕನಿಷ್ಠ ₹135 ರಿಂದ ಗರಿಷ್ಠ ₹165 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು. (ಸಂಪೂರ್ಣ ಸ್ಥಿರತೆ)
3) ಕೊಕ್ಕೋ(ಹಸಿ/ಒಣ) : ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತಗಳಿಲ್ಲದೇ ಹಸಿ ಕೊಕ್ಕೋ ಕನಿಷ್ಠ ₹70 ರಿಂದ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಕನಿಷ್ಠ ₹290 ರಿಂದ ಗರಿಷ್ಠ ₹320ರಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರವಾಗಿ ಮುಂದುವರಿದಿತ್ತು.

ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಇಳಿಕೆ
1) ಗ್ರೇಡ್ ರಬ್ಬರ್ : ಸೋಮವಾರದಂದು ₹273.50 ಇದ್ದ ಬೆಲೆ ಶುಕ್ರವಾರದಂದು ₹269ಕ್ಕೆ ಬಂದು ತಲುಪಿತ್ತು.(4.50 ರೂಪಾಯಿ ಇಳಿಕೆ)
2) ಲಾಟ್ ರಬ್ಬರ್ : ಸೋಮವಾರದಂದು ₹254 ಇದ್ದ ಬೆಲೆ ಶುಕ್ರವಾರದಂದು ₹251ಕ್ಕೆ ಬಂದು ತಲುಪಿತ್ತು.(3 ರೂಪಾಯಿ ಇಳಿಕೆ)
3) ಸ್ಕ್ರ್ಯಾಪ್ ಪ್ರಥಮ ದರ್ಜೆ : ಸೋಮವಾರದಂದು ₹169 ಇದ್ದ ಬೆಲೆ ಶುಕ್ರವಾರದಂದು ₹167ಕ್ಕೆ ಬಂದು ತಲುಪಿತ್ತು.(2 ರೂಪಾಯಿ ಇಳಿಕೆ)
4) ಸ್ಕ್ರ್ಯಾಪ್ ದ್ವಿತೀಯ ದರ್ಜೆ : ಸೋಮವಾರದಂದು ₹159 ಇದ್ದ ಬೆಲೆ ಶುಕ್ರವಾರದಂದು ₹157ಕ್ಕೆ ಬಂದು ತಲುಪಿತ್ತು.(2 ರೂಪಾಯಿ ಇಳಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಆಗಸ್ಟ್ 31 ಸೋಮವಾರದಿಂದ ಸೆಪ್ಟೆಂಬರ್ 05 ಶನಿವಾರದವರೆಗಿನ) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಆವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading