“ಸಂಸತ್ ಅಧಿವೇಶನ ಎದುರಿಸಲು ಮೋದಿ–ಶಾ ಹೆದರಿದ್ದಾರೆ” : ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ; ಸುಳ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿ

ಸುಳ್ಯ : ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನ ಮಳೆಗಾಲದ ಅಧಿವೇಶನವನ್ನು ಸಮರ್ಥವಾಗಿ ಎದುರಿಸಲು ಹೆದರಿ ಅಧಿವೇಶನದಿಂದ ದೂರ ಉಳಿದಿದ್ದಾರೆ ಎಂದು ಕೆಸಿಸಿಸಿ ವಕ್ತಾರ ಹಾಗೂ ಸೂಡಾ ಅಧ್ಯಕ್ಷ ಅಮಳ ರಾಮಚಂದ್ರ ಆರೋಪಿಸಿದರು.

. . . . . . . . .

ಅವರು ಆ. 20ರಂದು ಸುಳ್ಯದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಇಡೀ ಅಧಿವೇಶನದಿಂದ ದೂರ ಉಳಿದಿರುವ ಉದಾಹರಣೆಗಳು ಇಲ್ಲ. 19 ದಿನಗಳ ಕಾಲ ನಡೆದ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಿ ಗೃಹ ಸಚಿವ ಅಮಿತ್ ಶಾ ಅವರು ಅಧಿವೇಶನದ ಬಹುತೇಕ ದಿನಗಳಲ್ಲಿ ಭಾಗವಹಿಸಲಿಲ್ಲ. ಸಂಸತ್ ಭವನಕ್ಕೆ ಆಗಮಿಸುತ್ತಿದ್ದರೂ ಅಧಿವೇಶನ ನಡೆಯುವ ಸಭಾಭವನಕ್ಕೆ ತೆರಳದೆ ತಮ್ಮ ಕಚೇರಿಗಳಲ್ಲೇ ಉಳಿದುಕೊಳ್ಳುತ್ತಿದ್ದರು ಎಂದು ಆರೋಪಿಸಿದರು.

. . . . . . .

ಅಧಿವೇಶನಕ್ಕೆ ಹಾಜರಾದರೆ ವಿರೋಧ ಪಕ್ಷಗಳು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಪ್ರಶ್ನಿಸಲಿವೆ ಎಂಬ ಕಾರಣಕ್ಕೆ ಅವರು ಅಧಿವೇಶನದಿಂದ ದೂರ ಉಳಿದಿದ್ದಾರೆ. ಕೊನೆಯ ದಿನ ಸದನಕ್ಕೆ ಹಾಜರಾಗಿ ಇಡೀ ಅಧಿವೇಶನಕ್ಕೆ ಗೈರಾಗಿದ್ದ ಆರೋಪದಿಂದ ಪಾರಾಗಲು ವಿಫಲ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.

ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ ಹಣದ ಅವ್ಯವಹಾರದ ಆರೋಪಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಈ ವಿಚಾರಗಳನ್ನು ಎದುರಿಸಲು ಸಾಧ್ಯವಾಗದೆ ಪ್ರಧಾನಿ ಮತ್ತು ಗೃಹ ಸಚಿವರು ಸಂಸತ್ ಅಧಿವೇಶನದಿಂದ ಪಲಾಯನ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕ ಪ್ರವೀಣ್ ಮುಂಡೋಡಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೇಕಲ್ಲು, ಸುಳ್ಯ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರು ಮಹೇಶ್ ಬೆಳ್ಳಾರ್‌ಕರ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಧನುಷ್ ಕುಕ್ಕೇಟಿ, ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಮಡ್ತಿಲ ಹಾಗೂ ಕೇಶವ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading