ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ಬಿ.ಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ ಸಮುದಾಯ ಭವನ, ಅಮರಶ್ರೀಭಾಗ್‌ನಲ್ಲಿ ಆ. 17ರಂದು ನಡೆಯಿತು. ಮುಖ್ಯ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಮುಂಡೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಪಡೆದು ಉತ್ತಮ ನಾಗರೀಕರಾಗಿ ಉನ್ನತ ಹುದ್ದೆಯನ್ನು ಪಡೆಯುವವರಾಗಿ ಎಂದು ಹೇಳಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಡೀನ್-ಅಕಾಡೆಮಿಕ್‌ ಡಾ. ಪ್ರಜ್ಞಾ ಯಂ.ಆರ್. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ Student Induction Programme ಬಗ್ಗೆ ವಿವರಿಸಿದರು. 

. . . . . . . . .

ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಮುಖ್ಯ ಅತಿಥಿಯವರನ್ನು ಸನ್ಮಾನಿಸಿದರು. ಅವರು ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಬಯಸುತ್ತಾ ಕಾಲೇಜಿನ ವಿವಿಧ ವೈಷಿಷ್ಟ್ಯತೆ ಬಗ್ಗೆ ವಿವರಿಸುತ್ತಾ “ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಉತ್ತಮ ಸಂಸ್ಕಾರ, ಸಮಯ ಮತ್ತು ಶ್ರದ್ಧೆಯಿಂದ ಶಿಸ್ತನ್ನು ಅಳವಡಿಸಿಕೊಂಡು ಮುಂದಿನ ನಾಲ್ಕು ವರ್ಷಗಳ ವಿದ್ಯಾರ್ಥಿ ಜೀವನ ಉತ್ತಮವಾಗಿ ಇರಲಿ” ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದಎ.ಒ.ಎಲ್.ಇ.(ರಿ) ಕಮಿಟಿ ‘ಬಿ’ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ತಂತ್ರಜ್ಞರಾಗುವಂತೆ ಸೂಚಿಸಿದರು. ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಪೋಷಕರಾದ ಪ್ರೊ. ವಿಜಯಕುಮಾರ್‌ ಕಾಣಿಚ್ಚಾರ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

. . . . . . .

ವಿದ್ಯಾರ್ಥಿನಿ ಖುಷಿ ಕೆ.ಟಿ., ಅಶ್ವಿನಿ ಎ.ಜಿ. ಮತ್ತು ತೃಷ ಆರ್‌. ಪ್ರಾರ್ಥಿಸಿ, ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಸ್ವಾಗತಿಸಿ, ಕಾಲೇಜಿನ ಬಗ್ಗೆ ಪರಿಚಯಿಸಿ, ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ಸುರೇಖಾ ಎಂ. ವಂದಿಸಿ, ಪ್ರಾಧ್ಯಾಪಕಿ ಪ್ರೊ. ಪ್ರಜ್ಞ ವಿ.ಟಿ., ಪ್ರೊ. ಸೌಮ್ಯ ಎಂ.ಕೆ. ಹಾಗೂ ಪ್ರೊ. ಆಶ್ರಿತಾ ಕೆ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading