ಬೆಳ್ಳಾರೆ ಕೆ.ಪಿ.ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ

ಬೆಳ್ಳಾರೆ ಕೆ.ಪಿ.ಎಸ್ ಸರಕಾರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ‌ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ‌ ಹರ್ಷ ಜೋಗಿಬೆಟ್ಟು ರವರು ಧ್ವಜಾರೋಹಣ ನೆರವೇರಿಸಿದರು. ಅಮರ ಸುಳ್ಯ ಸಮರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಾ ಕೋಲ್ಚಾರುರವರು ಜಗತ್ ಫೌಂಡೇಶನ್ ಮೂಲಕ ಹತ್ತು ಸಾವಿರ ರೂಪಾಯಿಗಳನ್ನು ಶಾಲಾ ಶಿಕ್ಷಣದ ಕಲಿಕೆಯ ವ್ಯವಸ್ಥೆಗಳಿಗಾಗಿ ನೀಡಿದರು. ಈ 

. . . . . . . . .

ಸಂದರ್ಭದಲ್ಲಿ ಚಂದ್ರಾ ಕೋಲ್ಚಾರುವರು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡುತ್ತಾ “ಹಿರಿಯರ ತ್ಯಾಗ, ಬಲಿದಾನಗಳನ್ನು , ದೇಶಪ್ರೇಮವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಬೇಕೆಂದರು. ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡ ಐತಿಹಾಸಿಕ ಘಟನೆ ನಡೆದಿದ್ದು ಬಂಗ್ಲೆಗುಡ್ಡೆಯು ಪ್ರೇಕ್ಷನೀಯ ಕೇಂದ್ರವಾಗಬೇಕಾಗಿದೆ” ಎಂದರು.

. . . . . . .

ಕಾರ್ಯಕ್ರಮದಲ್ಲಿ ಬೆಳ್ಳಾರೆಯ ಕಾಮಧೇನು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು, ಶಾಲಾ ಮಕ್ಕಳು,ಎಸ್.ಡಿ.ಎಂ.ಸಿಯ ನವೀನ್ ಸಾರಕೆರೆ, ಮುರಳಿ ತಡಗಜೆ, ವಿದ್ಯಾರ್ಥಿಗಳ ಪೋಷಕರು, ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading