ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಡಾ.ರವಿ ಕಕ್ಕೆಪದವು ಅವರಿಗೆ ಸನ್ಮಾನ

ಸುಬ್ರಹ್ಮಣ್ಯ ಆಗಸ್ಟ್ 16 : ಆಗಸ್ಟ್ 15 ರಂದು ಜರಗಿದ 80ನೇ ಸ್ವಾತಂತ್ರ್ಯೋತ್ಸವ ದಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸಮಾಜ ಸೇವಕ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.

. . . . . . . . .

ಸನ್ಮಾನ ನೆರವೇರಿಸಿದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡುತ್ತಾ “ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ಕರೆಸಿ ಅಪರಾಧಿ ಆದರೆ ಶಿಕ್ಷೆ ಕೊಡುವ ಪ್ರಮೇಯ ಇದೆ. ಹಾಗೆಯೇ ಕೆಲವೊಂದು ಕೇಸುಗಳನ್ನು ಎರಡು ತಂಡದವರ ಸಮಕ್ಷಮದಲ್ಲಿ ಮಾತುಕತೆಯಲ್ಲಿ ಕೂಡ ಮುಗಿಸುತ್ತೇವೆ. ಅಲ್ಲದೆ ಸಮಾಜದಲ್ಲಿ ಸಮಾಜ ಸೇವೆಯನ್ನ ಮಾಡುತ್ತಾ ಬಂದಿರುವವರನ್ನು ಗುರುತಿಸಿ, ಸನ್ಮಾನ ಕಾರ್ಯಕ್ರಮವನ್ನು ಕೂಡ ಮಾಡುತ್ತೇವೆ. ಆ ರೀತಿಯಾಗಿ ಸುಬ್ರಹ್ಮಣ್ಯದಲ್ಲಿ ಬಡವರ ಪಾಲಿನ ಆಶಾಕಿರಣ, ಸೂರು ಇಲ್ಲದವರಿಗೆ ಸೂರು, ಬಡಬಗ್ಗರಿಗೆ ಸಹಾಯ ಹಸ್ತ ಹಾಗೂ ದಾನ ಮಾಡುತ್ತಾ ಬಂದಿರುವ ಡಾ. ರವಿ ಕಕ್ಕೆಪದವು ಅವರನ್ನ ಗುರುತಿಸಿ ಸನ್ಮಾನಿಸಲು ಸಂತೋಷಪಡುತ್ತೇವೆ” ಎಂದರು. ಇದಕ್ಕೆ ಉತ್ತರಿಸಿದ ಡಾ. ರವಿ ಕಕ್ಕೆ ಪದವು ಅವರು “ಈ ಸನ್ಮಾನದಿಂದ ಉಳಿದವರಿಗೆ ಸಮಾಜದಲ್ಲಿ ಸಮಾಜ ಸೇವೆ ಮಾಡುವ ಬಗ್ಗೆ ಹೆಚ್ಚು ಹೆಚ್ಚು ಒಲವು ಮೂಡುದವರೊಂದಿಗೆ ಪ್ರೇರಣೆಯಾಗಲಿ. ನಮ್ಮನ್ನು ಗುರುತಿಸಿದರೂ, ಗುರುತಿಸದಿದ್ದರೂ ನಮ್ಮ ಸಮಾಜ ಸೇವೆ ನಿರಂತರವಾಗಿ ನಡೆಯುತ್ತದೆ” ಎಂದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading