ಪಂಜ : ಸಮರ್ಪಕ ಲೆಕ್ಕಪತ್ರ ನೀಡಲು ಆಡಳಿತ ಸಮಿತಿ ವಿಫಲ – ರಾತ್ರಿಯಾದರೂ ಮುಗಿಯದ ಭಕ್ತಾಧಿಗಳ ಸಭೆ – ರಾಜೀನಾಮೆಗೆ ಒತ್ತಾಯ

ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ಪಾರದರ್ಶಕತೆ ಮತ್ತು ಗುತ್ತಿಗೆ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಗೊಂದಲಗಳಿಗೆ ಸ್ಪಷ್ಟನೆ ಕೋರಿ ಆ.15ರಂದು ಸಾರ್ವಜನಿಕ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಭಕ್ತಾದಿಗಳು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಮನವಿ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಊಹಾಪೋಹಗಳು ಹಾಗೂ ಗೊಂದಲಗಳು ಉಂಟಾಗಿವೆ. ಈ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕವಾದ ಸ್ಪಷ್ಟನೆ ನೀಡುವಂತೆ ಮನವಿಯಲ್ಲಿ ತಿಳಿಸಿದ್ದರು.

. . . . . . . . .

ಭಕ್ತಾಧಿಗಳ ಅಶಯದಂತೆ ಆ.15 ರಂದು ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಸಭೆ ರಾತ್ರಿ ಗಂಟೆ 930 ಕಳೆದರೂ ಭಕ್ತಾಧಿಗಳ ಪ್ರಶ್ನೆಗೆ ಉತ್ತರಿಸಲು ಅಡಳಿತ ಸಮಿತಿ ವಿಫಲಗೊಂಡಿದ್ದು, ರಾಜೀನಾಮೆ ಒತ್ತಾಯ ಕೇಳಿ ಬಂದಿದೆ. ಸಭೆಯಲ್ಲಿ ಸುಮಾರು 500 ಕ್ಕೂ ಮಿಕ್ಕಿ ಭಕ್ತಾಧಿಗಳು ಸೇರಿದ್ದಾರೆನ್ನಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading