ಕಲ್ಮಡ್ಕ ಹನ್ನೊಂದನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಮಂತ್ರಣ ಪತ್ರಿಕೆ ಬಿಡುಗಡೆ

ಯುವಸ್ಪೂರ್ತಿ ಸೇವಾ ಸಂಘ(ರಿ.) ಕಲ್ಮಡ್ಕ ಇದರ ವತಿಯಿಂದ ದಿನಾಂಕ 06 ಸೆಪ್ಟೆಂಬರ್, 2026 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಭವನದಲ್ಲಿ ನಡೆಯಲಿರುವ ಹನ್ನೊಂದನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾ ಭವನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲೋಕಯ್ಯ ನಾಯ್ಕ ಬೊಳಿಯೂರು, ಉಪಾಧ್ಯಕ್ಷರಾದ ಬಾಲಪ್ಪ ನಾಯ್ಕ ಕಾಚಿಲ ನೆರವೇರಿಸಿದರು. ಯುವಸ್ಪೂರ್ತಿ ಸೇವಾ ಸಂಘದ ಅಧ್ಯಕ್ಷರಾದ ಸಚಿತ್ ಪೆರಿಯಪ್ಪು, ಉಪಾಧ್ಯಕ್ಷರಾದ ಚಿದಾನಂದ ಮಾಳಪ್ಪಮಕ್ಕಿ, ಪವನ್ ಮೂಲೆಮನೆ, ಪ್ರಧಾನ ಕಾರ್ಯದರ್ಶಿ ಪುನೀತ್ ಮೂಲೆಮನೆ, ಜೊತೆ ಕಾರ್ಯದರ್ಶಿ ವಸಂತ ಕುಮಾರ್ ರಾಮತ್ತಿಕಾರು, ಸಂಘಟನಾ ಕಾರ್ಯದರ್ಶಿ ಕರುಣಾಕರ ಶೆಟ್ಟಿಗದ್ದೆ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಜ್ ಕಡಂಬುಕಾನ, ಸದಸ್ಯರಾದ ಪುರುಷೋತ್ತಮ ಬ್ರಾಂತಿಗದ್ದೆ, ಶಿವರಾಮ ಕೊಳೆಂಜಿಕೋಡಿ, ಕೇಶವ ಕೊಳೆಂಜಿಕೊಡಿ, ರಾಮಚಂದ್ರ ಕೆ ಕಾಚಿಲ, ರಂಜಿತ್ ಮಾಳಪ್ಪಮಕ್ಕಿ, ವಿನ್ಯಾಸ್ ರೈ ಮರಕ್ಕಡ ಉಪಸ್ಥಿತರಿದ್ದರು.

. . . . . . . . .

ಕಾರ್ಯಕ್ರಮಗಳು : ಪೂರ್ವಾಹ್ನ 8.00ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಸ್ಕಾರ ಅಂಗನವಾಡಿ ಕೇಂದ್ರ ಮಕ್ಕಳಿಂದ ಭಜನಾ ಕಾರ್ಯಕ್ರಮ ,ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು,ಚಿಕ್ಕ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆ,ಸಂಜೆ 4:00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಹಾಗೂ 6.00 ಗಂಟೆಯಿಂದ ಪ್ರಸಿದ್ಧ ಕಲಾವಿದರುಗಳ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಸಹಸ್ರ ಕವಚ ಮೋಕ್ಷ” ನಡೆಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading