ಏಲಿಮಲೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಭಜರಂಗ ದಳ, ಮಾತೃ ಶಕ್ತಿ ದುರ್ಗವಾಹಿನಿ, ಅಯೋದ್ಯೆ ಘಟಕ ಎಲಿಮಲೆ ಇದರ ಆಶ್ರಯದಲ್ಲಿ ಏಲಿಮಲೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯು ಆ. 13ರಂದು ರಾತ್ರಿ ನಡೆಯಿತು.

. . . . . . . . .

ಮೆರವಣಿಗೆಗೆ ಪ್ರಗತಿಪರ ಕೃಷಿಕರು ಹಾಗೂ ಹಿರಿಯರಾಗಿರುವ ಅಡಿಗೈ ತ್ಯಾಂಪ್ಪಣ್ಣ ಗೌಡ ಚಾಲನೆ ನೀಡಿದರು. ನಂತರ ಏಲಿಮಲೆ ಮೇಲಿನ ಪೇಟೆಯಿಂದ ಪ್ರಾರಂಭಗೊಂಡು ಕೇಳಿಗಿಪೇಟೆವರೆಗೆ ಸಾಗಿ ಮೇಲಿನ ಪೇಟೆಯಲ್ಲಿ ಸಮಪಾನಗೊಂಡಿತ್ತು. ನಂತರ ಸಭಾ ಕಾರ್ಯಕ್ರಮವು ಏಲಿಮಲೆಯಲ್ಲಿ ನಡಯಿತು.

. . . . . . .

ಭೋಜಪ್ಪ ಗೌಡ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ದೈವ ನರ್ತನಕ ಹಾಗೂ ಉಪನ್ಯಾಸಕ ಡಾ. ರವೀಶ್ ಪಡುಮಲೆ ಅಖಂಡ ಭಾರತ ಸಂಕಲ್ಪ ದಿನದ ವಿಶೇಷತೆಯನ್ನು ಹೇಳಿದರು.

ವೇದಿಕೆಯಲ್ಲಿ ತಾಲೂಕು ವಿಶ್ವ ಹಿಂದೂ ಪರಿಷದ್ ಸಂಯೋಜಕು ಹರಿಪ್ರಸಾದ್ ಎಲಿಮಲೆ, ತಾಲೂಕು ಕಾರ್ಯದರ್ಶಿ ನವೀನ್ ಎಲಿಮಲೆ, ಜಿಲ್ಲಾ ಸಪ್ತಾಹಿಕ ಪ್ರಮುಖ ರೂಪೇಶ್ ಪೂಜಾರಿ ಮನೆ, ವಿಶ್ವ ಹಿಂದೂ ಪರಿಷದ್ ಅಯೋದ್ಯೆ ಘಟಕದ ಕಾರ್ಯದರ್ಶಿ ಸುನಿಲ್ ಸುಳ್ಳಿ ಹಾಗೂ ದುರ್ಗಾ ವಾಹಿನಿ ಪ್ರಮುಖು ಜಯಂತಿ ಏಲಿಮಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ತೀರ್ಥರಾಮ ಅಂಬೇಕಲ್ಲು, ನೆಲ್ಲೂರು ಕೇಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ ವಿಷ್ಣು ಭಟ್ ಕೇಪ್ಲಾಕಜೆ, ಗುತ್ತಿಗಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ಪ್ರವೀಣ್ ರಾವ್ ದೊಡ್ಡತೋಟ ಮೊದಲಾದವರು ಭಾಗವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ಚಿನ್ಮಯ ಕೇರ ಹಾಗೂ ಪ್ರಜ್ಞಾ ಗುಡ್ಡನಮನೆ ಹಾಡಿದರು. ಹರಿಪ್ರಸಾದ್ ಬಿ.ವಿ. ಸ್ವಾಗತಿಸಿ, ಕುಲದೀಪ್ ಹಾರ್ಲಡ್ಕ್ ವಂದಿಸಿ, ಉದಯಕುಮಾರ್ ಚಳ್ಳ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading