ಚೊಕ್ಕಾಡಿ : ಅಚ್ಚಿಪಳ್ಳದಲ್ಲಿ ಸಂಭ್ರಮದ ಕೆಸರುಗದ್ದೆ ಕ್ರೀಡಾಕೂಟ – ಜನಪದ ಕ್ರೀಡೆಗಳೊಂದಿಗೆ ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ

ಅಮರಮುಡ್ನೂರು ಗ್ರಾಮದ ಚೆನ್ನಪರಿ ಸಮೀಪದ ಅಚ್ಚಿಪಳ್ಳದಲ್ಲಿ ಆ.09ರಂದು ಈ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಧಾರ್ಮಿಕ ಕಾರ್ಯಕ್ರಮವು ಗರುಡ ಯುವಕ ಮಂಡಲ(ರಿ.) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಜಂಟಿ ಆಶ್ರಯದಲ್ಲಿ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಸಹಯೋಗದೊಂದಿಗೆ ಸಂಭ್ರಮದಿಂದ ನಡೆಯಿತು.

. . . . . . . . .

ಶ್ರೀಮತಿ ಸ್ವಾತಿ ಪಡ್ಪು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ನಾಯರ್ ಪೂಜಾರಿಗಳಾದ ಕುಸುಮಾಧರ ಕೊಳಂಬೆ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಯೂರಿ ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ತಂಟೆಪ್ಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

. . . . . . .

ಮುಖ್ಯ ಅತಿಥಿಗಳಾಗಿ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್, ಪುತ್ತೂರು ಶಾಖೆಯ ಪ್ರಬಂಧಕರಾದ ರಾಘವೇಂದ್ರ ಪಾಟೀಲ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮರಮುಡ್ನೂರು–ಕುಕ್ಕುಜಡ್ಕದ ಮುಖ್ಯಗುರುಗಳಾದ ಶ್ರೀಮತಿ ಸವಿತಾ ಪಡ್ಪು ಹಾಗೂ ಕೆವಿಜಿ ಪಾಲಿಟೆಕ್ನಿಕ್, ಸುಳ್ಯದ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು. ಗದ್ದೆಯ ಮಾಲಕರಾದ ಶ್ರೀಮತಿ ಬೊಳಿಯಮ್ಮ ಅವರು ಗೌರವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಪಾಟೀಲ್ ಅವರು, ಯುವಕ–ಯುವತಿ ಮಂಡಳಿಗಳು ಗ್ರಾಮೀಣ ಜನಪದ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಬಾಲಕೃಷ್ಣ ಬೊಳ್ಳೂರು ಹಾಗೂ ಶ್ರೀಮತಿ ಸವಿತಾ ಪಡ್ಪು ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಗರುಡ ಯುವಕ ಮಂಡಲದ ಅಧ್ಯಕ್ಷ ಅರುಣ ಕುಮಾರ್ ಮುಂಡಾಜೆ ಸ್ವಾಗತಿಸಿದರು. ಶ್ರೀಮತಿ ಉಷಾಲತಾ ಪಡ್ಪು ವಂದಿಸಿದರು.

ಕೆಸರಿನ ಗದ್ದೆಯಲ್ಲಿ ಕ್ರೀಡಾ ಸಂಭ್ರಮ : ಬಳಿಕ ಹ್ಯಾಂಡ್‌ಬಾಲ್, ಬೆರಿಚೆಂಡು, ಗುಂಪು ಕಂಬಳ ಓಟ, ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಜನಪದ ಕ್ರೀಡಾ ಸ್ಪರ್ಧೆಗಳು ನಡೆದವು. ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್, ಪುತ್ತೂರು ಪ್ರಾಯೋಜಿತ ‘ಮುಳಿಯ ನಿಧಿ ಶೋಧ’ ಸ್ಪರ್ಧೆಯು 45 ವರ್ಷ ಮೇಲ್ಪಟ್ಟವರಿಗಾಗಿ ವಿಶೇಷ ಆಕರ್ಷಣೆಯಾಗಿತ್ತು.

ಕ್ರೀಡಾಕೂಟದಲ್ಲಿ ಸುಮಾರು 5ರಿಂದ 80 ವರ್ಷ ವಯೋಮಾನದವರೆಗಿನ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೆಸರಿನ ಆಟದ ಸಂಭ್ರಮವನ್ನು ಅನುಭವಿಸಿದರು. ಗ್ರಾಮೀಣ ಜನಪದ ಕ್ರೀಡೆಗಳ ಮೂಲಕ ಮಕ್ಕಳು ಹಾಗೂ ಹಿರಿಯರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡಾಸ್ಫೂರ್ತಿ ಮೆರೆದರು.

ಸಾಧಕರಿಗೆ ಸನ್ಮಾನ – ವಿಜೇತರಿಗೆ ಬಹುಮಾನ : ಸಂಜೆ 6:30ರ ನಂತರ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಗರುಡ ಯುವಕ ಮಂಡಲದ ಅಧ್ಯಕ್ಷ ಅರುಣ್ ಕುಮಾರ್ ಮುಂಡಾಜೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಗೌಡ ಕರ್ಮಜೆ, ಡಾ. ಸನತ್ ದೇರಾಜೆ, ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯದ ಅಧ್ಯಕ್ಷ ಪವನ್ ಪಲ್ಲತಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ರೈತರತ್ನ ಪ್ರಶಸ್ತಿ ಪಡೆದ ಸಮಗ್ರ ಕೃಷಿಕ ಚಂದ್ರಶೇಖರ ಗೌಡ ಸುಬ್ಬಯ್ಯಮೂಲೆ ಹಾಗೂ ಯಾವುದೇ ಫಲಾಪೇಕ್ಷೆಯಿಲ್ಲದೆ ನಾಟಿ ಔಷಧಿ ಸೇವೆ ನೀಡುತ್ತಾ ಊರಿನ ಜನರಿಗೆ ನೆರವಾಗುತ್ತಿರುವ ಪದ್ಮಾನಂದ ಕೊರತ್ಯಡ್ಕ ಅವರನ್ನು ಸನ್ಮಾನಿಸಲಾಯಿತು, ಹಾಗೂ ಹತ್ತನೇ ತರಗತಿಯಲ್ಲಿ ವಿಶಿಷ್ಟ ಸಾಧನೆಗೈದ ಮಕ್ಕಳನ್ನು ಗೌರವಿಸಲಾಯಿತು. ಗದ್ದೆಯ ಮಾಲಕರಾದ ಯತೀಶ ಪೂಮಲೆ ಅವರು ಗೌರವ ಉಪಸ್ಥಿತರಿದ್ದರು.

ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಸನತ್ ದೇರಾಜೆ, ಪವನ್ ಪಲ್ಲತಡ್ಕ ಹಾಗೂ ಕೇಶವ ಗೌಡ ಕರ್ಮಜೆ ಅವರು ಯುವಕ-ಯುವತಿ ಮಂಡಳಿಗಳ ಸಾಮಾಜಿಕ ಕಳಕಳಿ, ಸೇವಾ ಚಟುವಟಿಕೆಗಳು ಹಾಗೂ ಗ್ರಾಮೀಣ ಕ್ರೀಡೆಗಳ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

ಶರಣ್ ಕರ್ಮಜೆ ಅವರ ಸ್ವಾಗತದೊಂದಿಗೆ ಆರಂಭಗೊಂಡ ಸಮಾರೋಪ ಸಮಾರಂಭವು ಮನೋಜ್ ಪಡ್ಪು ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಬಳಿಕ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದವು. ನವೀನ್ ಬಾಂಜಿಕೋಡಿ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading