ಕಡಬದಲ್ಲಿ ವಿಶ್ವ ತುಳುವೆರ್ ಕಡಬ ಘಟಕ ವತಿಯಿಂದ ಆಟಿ ಕಷಾಯ ವಿತರಣೆ

ಕಡಬ : ವಿಶ್ವ ತುಳುವೆರ್ ಮಂಗಳೂರು ಹಾಗೂ ವಿಶ್ವ ತುಳುವೆರ್ ಕಡಬ ಘಟಕ ವತಿಯಿಂದ ಸಂಘ – ಸಂಸ್ಥೆಗಳ ಸಹಯೋಗದೊಂದಿಗೆ ಆಟಿ ಅಮವಾಸ್ಯೆ ದಿನದ ಪ್ರಯುಕ್ತ ಹಾಲೆ ಮರದ ಕೆತ್ತೆಯ ಕಷಾಯ(ಪಾಲೆದ ಕೆತ್ತೆದ ಕಷಾಯ) ಮತ್ತು ಆಟಿ ಅವಲಕ್ಕಿ ವಿತರಣೆ ಕಾರ್ಯಕ್ರಮ ಕಡಬ ಮಧ್ಯ ಪೇಟೆಯಲ್ಲಿ ಬುಧವಾರ ಬೆಳಗ್ಗೆ ನಡೆಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಕಷಾಯ ಸೇವಿಸಿದರು ಹಾಗೂ ಅವಲಕ್ಕಿ ಸೇವಿಸಿದರು. 
ಈ ಸಂದರ್ಭದಲ್ಲಿ ವಿಶ್ವ ತುಳುವೆರ್ ಘಟಕ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ, ಕಾರ್ಯದರ್ಶಿ ದಯಾನಂದ ಕಲ್ನಾರ್, ಸದಸ್ಯ ಸುಶಾನ್ ತಲೆಕ್ಕಿ, ಪ್ರಮುಖರಾದ ಉಮೇಶ್ ಸಾಕೋಟೆಜಾಲು, ಪ್ರೇಮಚಂದ್ ಅಜ್ಜರಮೂಲೆ, ರಾಜೇಂದ್ರ ನಂದಗುರಿ, ಸುರೇಶ್ ಕಲ್ಲೆಂಬಿ ಮತ್ತಿತರರು ಉಪಸ್ಥಿತರಿದ್ದು, ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading