ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಲ್ಮಕಾರು ಗ್ರಾಮ ಕಾಂಗ್ರೆಸ್ ಸಮಿತಿ ಪುನರ್‌ರಚನೆ ಹಾಗೂ ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಲ್ಮಕಾರು ಗ್ರಾಮ ಕಾಂಗ್ರೆಸ್ ಸಮಿತಿ ಪುನಾರಚನೆ ಮತ್ತು ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆ ಜು.26ರಂದು ಕಲ್ಮಕಾರು ಗ್ರಾಮದ ಗಡಿಕಲ್ಲು ರಾಧಾಕೃಷ್ಣ ಅವರ ಮನೆಯಲ್ಲಿ ನಡೆಸಲಾಯಿತು.

. . . . . . . . .

 ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಎಸ್.ಟಿ ಘಟಕ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಸುಳ್ಯ ಬ್ಲಾಕ್ ಎಸ್.ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ನಂದರಾಜ್ ಸಂಕೇಶ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕಲ್ಮಕಾರು ಗ್ರಾಮ ಉಸ್ತುವಾರಿ ರವಿಕುಮಾರ್ ಕಿರಿಭಾಗ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹರ್ಷಿತ್ ಕೊರಂಬಟ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ದಿನೇಶ್ ಮಡ್ತಿಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಯಶೋಧರ ಬಾಕಿಲ, ಸುಧೀರ್ ಅಮೆಮನೆ, ಮಂಜುನಾಥ ಮಡ್ತಿಲ ಹಾಗೂ ಅಮರ ಮುಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ಧನ ಆಚಾರ್ಯ ಕುಂಟಿಕಾನ, ಚೆನ್ನಕೇಶವ ಕೊಲ್ಲಮೊಗ್ರು ಉಪಸ್ಥಿತರಿದ್ದರು. 

. . . . . . .

ಕಲ್ಮಕಾರು ಗ್ರಾಮದ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ ಕೆ.ಎಂ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಬಿಲ್ಲಾರಮಜಲು ಅವರನ್ನು ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ರಾಮಣ್ಣ ಗೌಡ ಅಂಜನಕಜೆ, ಗುರುಚರಣ್ ಕೊಪ್ಪಡ್ಕ, ಕೊರಗಪ್ಪ ಮೆಂಟೆಕಜೆ, ಜಯರಾಮ ದಬ್ಬಡ್ಕ, ಕಮಲಾಕ್ಷ ಪನ್ನೆ ಮೊಗ್ರಮನೆ ಹಾಗೂ ಕಾರ್ಯದರ್ಶಿಗಳಾಗಿ ಶೇಷಪ್ಪ ಕೊಪ್ಪಡ್ಕ, ಯಾಕೂಬ್ ಪರ್ಲಡ್ಕ, ಹವ್ಯಾಸ್ ಕೆ.ಸಿ, ರಾಧಾಕೃಷ್ಣ ಗಡಿಕಲ್ಲು, ಯಶೋಧರ ಬಿ.ಸಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಾಧನ್ ಕೊಪ್ಪಡ್ಕ, ದಿಗಂತ್ ದೇವಜನ, ಸೋಮನಾಥ ಪನ್ನೆ, ಜನಾರ್ಧನ ಪನ್ನೆ, ಪುರುಷೋತ್ತಮ ಗಡಿಕಲ್ಲು, ಪ್ರಕಾಶ್ ಮೊಗ್ರ ಪನ್ನೆ, ಸೈನುದ್ದೀನ್ ಪದ್ನಡ್ಕ, ದಿನೇಶ್ ಕೊಪ್ಪಡ್ಕ, ನಾಗಪ್ಪ ಅಂಜನಕಜೆ, ಮೋಹನ್ ದಾಸ್ ಕೊಪ್ಪಡ್ಕ, ಯತೀಶ್ ಕೇಮಠಿ, ಲೋಕಯ್ಯ ಮಾಣಿಬೆಟ್ಟು, ಬಾಬು ಅಜಿಲ ಗುಳಿಕ್ಕಾನ, ಗೋಪಾಲಕೃಷ್ಣ ದಬ್ಬಡ್ಕ, ಕುಂಞ ಪನ್ನೆ ಹಾಗೂ ಗೌರವ ಸಲಹೆಗಾರರಾಗಿ ಯಶವಂತ ಬಿಳಿಮಲೆ ಹಾಗೂ ಹರ್ಷ ಕುಮಾರ್ ದೇವಜನ ಅವರನ್ನು ನೇಮಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading