Ad Widget

ಅಡ್ಕಾರು ಅಂಜನಾದ್ರಿ ಜಾತ್ರೋತ್ಸವದ ಪ್ರಯುಕ್ತ 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ ಆರಂಭ

ಜಾಲ್ಸೂರಿನ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಜಾತ್ರೋತ್ಸವದ ಅಂಗವಾಗಿ 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮವು ಮಾ.07ರಂದು ಪ್ರಾತ:ಕಾಲ ಆರಂಭಗೊಂಡಿದೆ.

. . . . . . . . .

48 ಗಂಟೆಗಳ ಅಖಂಡ ಭಜನಾ ಸೇವೆಯು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯದ ನಿರ್ದೇಶನದಲ್ಲಿ ಜರುಗುತ್ತಿದ್ದು, ಅಖಂಡ ಭಜನಾ ಸಮಿತಿ ಗೌರವಾಧ್ಯಕ್ಷರಾದ ಜಯರಾಮ ರೈ ಜಾಲ್ಸೂರು ಅವರು ದೀಪಪ್ರಜ್ವಲನೆ ಮಾಡಿದರು.

. . . . . . .

ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಾಧಿಕಾರಿಗಳು, ಶ್ರೀ ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಅಖಂಡ ಭಜನಾ ಸೇವೆಯು ಶ್ರೀ ಪ್ರಸನ್ನಾಂಜನೇಯ ಬ್ರಹ್ಮಕಲಶ ಅಖಂಡ ಭಜನಾ ಸೇವಾ ಸಮಿತಿಯ ನಿರ್ವಹಣೆಯಲ್ಲಿ ಮಾ.9ರಂದು ಸೂರ್ಯೋದಯದ ತನಕ ನಿರಂತರ 48 ಗಂಟೆಗಳ ಕಾಲ ಜರುಗಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading