- Thursday
- April 23rd, 2026
ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ವಲಯ, ಸ್ಕೌಟ್ ಗೈಡ್ ಯುವದ್ವನಿ , ಯುವಕ ಮಂಡಲ(ರಿ) ಕನಕಮಜಲು, ಗ್ರಾಮ ಪಂಚಾಯತ್ ಕನಕಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅರಣ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ ಪೆರ್ನಾಜೆಯಿಂದ ಪಂಜಿಗುಂಡಿಯವರೆಗೆ ಮಾ 21 ರಂದು ನಡೆಯಿತು ಪೆರ್ನಾಜೆಯಿಂದ ಆನೆಗುಂಡಿ ಮೂಲಕ ಪಂಜಿಗುಂಡಿಯವರೆಗೆ ರಸ್ತೆಯ ಎರಡು ಬದಿಗಳಲ್ಲಿದ್ದ ಕಸಗಳನ್ನು ಹೆಕ್ಕಿ ಸ್ವಚ್ಛತಾ...
ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ಗುತ್ತಿಗಾರು ಇದರ ನೂತನ ಉಳಿತಾಯ ಯೋಜನೆಯ ಎರಡನೇ ಫ್ರೀ ಡ್ರಾ ಮಾ.16 ರಂದು ನಡೆಯಿತು. ಯುವ ಉದ್ಯಮಿ ವೀರೇಶ್ ನೆಡ್ಚಿಲ್ ವಿಜೇತರ ಆಯ್ಕೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಜಯಂತ್ ತಳೂರು, ಲೋಹಿತ್ ಮಾವಿನಗೊಡ್ಲು ಮತ್ತಿತರರು ಉಪಸ್ಥಿತರಿದ್ದರು. ಲಿಖಿತ ಅಚಳ್ಳಿ ( ನಂ. 1013) ಉಚಿತ ಡ್ರಾದ ವಿಜೇತರಾಗಿ ಆಯ್ಕೆಯಾದರು. ಉಳಿತಾಯ...
ನವೋದಯ ಮತ್ತು ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಕಳೆದ 18 ವರ್ಷಗಳಿಂದ ತರಬೇತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಏ.15 ರಿಂದ ಮೇ. 15ರವರೆಗೆ ನಡೆಯಲಿದೆ. ಒಂದು ತಿಂಗಳು ನಡೆಯುವ ಈ ತರಬೇತಿ ಶಿಬಿರದಲ್ಲಿ 4 ಅಥವಾ 5ನೇ ತರಗತಿಯಲ್ಲಿ ಓದುತ್ತಿರುವ...
ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ತಿಲಕರಾಜ್ (29) ಎಂದು ಗುರುತಿಸಲಾಗಿದೆ.ತಿಲಕರಾಜ್ ಅವರು ಮಾ.20 ರಂದು ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆ ತೆರಳುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಗೂನಡ್ಕದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು. ಮಾ.21...
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕೋಲ್ಚಾರು ಇಲ್ಲಿಯ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸುವ ಪ್ರತಿಷ್ಠಿತ INSPIRE Awards – MANAK ಯೋಜನೆಗೆ ಆಯ್ಕೆಯಾಗಿರುತ್ತಾರೆ.ಈ ಯೋಜನೆಯಡಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಚಿಂತನ್ ಕೆ.ಎಸ್, ತೃಪ್ತಿ ಕೆ.ವಿ, ಯೋಗರಾಜ ಫಕ್ಕಿರೇಶ ಮಾದರ ಹಾಗೂ...
ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ ರಂಜಾನ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.ಸುಳ್ಯ ನಗರ ಪಂಚಾಯತ್ ನ ಪೌರ ಕಾರ್ಮಿಕರು ನಗರ ಸ್ವಚ್ಛಗೊಳಿಸಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಸಿಹಿ ಹಂಚಿ, ಧನ ಸಹಾಯವನ್ನು ನೀಡಿ ಅವರೊಂದಿಗೆ ಸ್ವಲ್ಪ ಕಾಲ ಬೆರೆತು ಅವರೊಂದಿಗೆ ಅವರ ಕಷ್ಟ-ಸುಖಗಳ ಬಗ್ಗೆ ಅರಿತುಕೊಂಡರು.ಈ ಸಂದರ್ಭದಲ್ಲಿ ಶ್ರೀ ಶಾರದಾoಭ ಸೇವಾ...
ದೇಲಂಪಾಡಿ ಗ್ರಾಮದ ಬಂದ್ಯಡ್ಕ ದಿ.ಹೊನ್ನಪ್ಪ ಗೌಡರ ಪುತ್ರ ಲಿಂಗಪ್ಪ ಗೌಡ ರವರು ಮಾ.19ರಂದು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಸೇಸಮ್ಮ, ಪತ್ನಿ ಭಾರತಿ, ಪುತ್ರಿಯರಾದ ಕು.ಭೂಮಿಕಾ, ಕು.ಪೂರ್ವಿಕಾ, ಪುತ್ರ ಹಾರ್ಧಿಕ್ ಹಾಗೂ ನಾಲ್ವರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಾ.19 ಗುರುವಾರದಂದು ಮಾವಿನಕಟ್ಟೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಜಾತ್ರಾ ಮಹೋತ್ಸವ ಮುಗಿದ ನಂತರ ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಮಾವಿನಕಟ್ಟೆ ಒಕ್ಕೂಟದ ವತಿಯಿಂದ ದೈವಸ್ಥಾನದ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ನಡೆಸಲಾಯಿತುಸುಮಾರು 30 ಜನ ಸದಸ್ಯರು ಭಾಗವಹಿಸಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ದೈವಸ್ಥಾನದ ಸುತ್ತಮುತ್ತ ಗುಡಿಸಿ ಸೃಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ...
ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಭರತ್ ನೆಕ್ರಾಜೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಕೆಟ್ಟೋಡಿ ಆಯ್ಕೆಯಾದರು.ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಸುರೇಶ್ ಬಾಲಾಡಿ, ವಿಶ್ವನಾಥ.ಬಿ, ಆನಂದ ಬನ, ಕುಸುಮಾಧರ.ಪಿ, ಬಾಲಕೃಷ್ಣ.ಯು, ವಸಂತಿ.ಪಿ, ದಿನೇಶ್.ಕೆ, ಕಾರ್ಯದರ್ಶಿ ಶ್ರೀಮತಿ ಗೀತಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಮಾರಾಟಾಧಿಕಾರಿ ಶ್ರೀಮತಿ...
Loading posts...
All posts loaded
No more posts
