ವಿದ್ಯಾಮಾತಾದಿಂದ ಬೇಸಿಗೆ ರಜಾ ಕಾಲದ ಶಾರ್ಟ್ ಟರ್ಮ್ ಕೋರ್ಸ್ ಗಳು ಪ್ರಾರಂಭ

ಬೇಸಿಗೆ ಕೌಶಲ ಸಂಭ್ರಮ 2026ರ ಮೂಲಕ ಪ್ರಾರಂಭವಾಗಲಿರುವ ಹೊಸ ತರಬೇತಿಗಳು ಇಂದಿನ ಯುವ ಪೀಳಿಗೆಯ ಭವಿಷ್ಯವನ್ನು ಬಾಲ್ಯದಲ್ಲೇ ಭದ್ರ ಗೊಳಿಸುವ ತರಬೇತಿಗಳನ್ನು ಪರಿಚಯಿಸಿದ ಪ್ರತಿಷ್ಠಿತ ತರಬೇತಿ ಕೇಂದ್ರ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಗಿಸಿರುವ ಮತ್ತು ಸದ್ಯ ಬೇಸಿಗೆ ರಜೆಯಲ್ಲಿರುವ ಅಲ್ಲದೇ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಪೂರಕವಾಗಿರುವ ಸೀಮಿತ ಅವಧಿಯಲ್ಲಿ ವಿಶೇಷ...

ಸುಳ್ಯದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್‌(ಇಂಡಿಯಾ) ಸುಳ್ಯ ಸೆಂಟ‌ರ್ ನ ಪದಪ್ರಧಾನ ಸಮಾರಂಭ ; “ಇಂಜಿನಿಯರ್ಸ್‌ಗಳಿಂದ ಸುಳ್ಯ ಅಭಿವೃದ್ಧಿ ಹೊಂದಲಿ” : ಶಾಸಕಿ ಕು| ಭಾಗೀರಥಿ ಮುರುಳ್ಯ

ಸುಳ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್ ಸಿವಿಲ್‌ ಇಂಜಿನಿಯರ್ಸ್(ಇಂಡಿಯಾ) ಇದರ ಸುಳ್ಯ ಸೆಂಟರ್ ನ ಪದಪ್ರಧಾನ ಸಮಾರಂಭವು ಮಾ.21ರಂದು ಸುಳ್ಯದ ಅರಂಬೂರಿನಲ್ಲಿರುವ ಹೋಟೆಲ್ ರಸಪಾಕ ಗ್ರಾಂಡ್ ಇದರ ಆಡಿಟೋರಿಯಂ ನಲ್ಲಿ ನಡೆಯಿತು.ಎ.ಸಿ.ಸಿ.ಇ(ಐ) ಸುಳ್ಯ ಸೆಂಟರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆರ್. ಕೃಷ್ಣರಾವ್ ನಾವೂರು, ಪ್ರಧಾನ ಕಾರ್ಯದರ್ಶಿ ಅವಿನ್ ಮಳಿ, ಕೋಶಾಧಿಕಾರಿ ಶ್ರೇಯಸ್ ಮುತ್ಲಾಜೆ...
Ad Widget

ಕಲ್ಮಕಾರು : ಮೊಬೈಲ್ ಬ್ಯಾಟರಿ ಸ್ಪೋಟ ; ಕಾಲಿಗೆ ಗಾಯ

ಮೊಬೈಲ್ ಬ್ಯಾಟರಿ ಸ್ಪೋಟಗೊಂಡು ಕಾಲಿಗೆ ಗಾಯವಾದ ಘಟನೆ ಇಂದು(ಮಾ.22) ಕೊಲ್ಲಮೊಗ್ರು ಗ್ರಾಮದ ಕಲ್ಮಕಾರಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ನಿವಾಸಿ ಗುರುಪ್ರಸಾದ್ ನಿಡುಬೆ ಎಂಬುವವರ ವಿವೋ ವೈ 100ಎ ಮೊಬೈಲ್ ಸ್ಪೋಟಗೊಂಡಿದ್ದು, ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಒಮ್ಮೆಲೇ ಸ್ಪೋಟಗೊಂಡ ಪರಿಣಾಮವಾಗಿ ಗುರುಪ್ರಸಾದ್ ರವರ ಕಾಲಿನ ತೊಡೆಯ ಭಾಗದಲ್ಲಿ ಚರ್ಮ ಬೆಂದು ಸುಟ್ಟ ರೀತಿ ಆಗಿದ್ದು,...

ಮಾ.24 ರಿಂದ ಎ.02 ರವರೆಗೆ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.24ರಂದು ಮೊದಲ್ಗೊಂಡು ಎ.02ರ ತನಕ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ಮಾ.24ರಂದು ಗಣಪತಿ ಹೋಮ, ಗೊನೆಮುಹೂರ್ತ ನಡೆಯಲಿದೆ. ಮಾ.27ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಗಂಟೆ 6:00 ರಿಂದ ಭಜನೆ, ಸಂಜೆ 7:00 ಗಂಟೆಯಿಂದ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು

ಸುಬ್ರಹ್ಮಣ್ಯ ಮಾರ್ಚ್ 22 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರವಿವಾರ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ, ತೀರ್ಥ ಪ್ರಸಾದ ಹಾಗೂ ಭೋಜನ ಪ್ರಸಾದ ಸ್ವೀಕರಿಸಿದರು. ಮಾರ್ಚ್ ತಿಂಗಳಲ್ಲಿ ಚಾಂದ್ರಮಾನ ಯುಗಾದಿ ಹಾಗೂ ರಂಜಾನ್ ರಜಾ ದಿನಗಳು ಒಟ್ಟೊಟ್ಟಿಗೆ ಬಂದದರಿಂದ ಸಾರ್ವಜನಿಕ ಸರ್ಕಾರಿ ಕಚೇರಿಗಳು ಹಾಗೂ ವಿದ್ಯಾಸಂಸ್ಥೆಗಳಿಗೆ ರಜೆ ಇದ್ದುದರಿಂದ ಅಧಿಕ...

ಐವರ್ನಾಡು ಮುತ್ತುಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕನಕಪುರ ಐವರ್ನಾಡು ಇದರ ಬ್ರಹ್ಮಕಲಶೋತ್ಸವವು ಎ.29,30 ಹಾಗೂ ಮೇ.1ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಹರ್ಷಿಣಿ.ಹೆಚ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ

ಹರ್ಷಿಣಿ.ಹೆಚ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ 82.50 ಅಂಕ ಪಡೆದು ಉತ್ತೀರ್ಣಳಾಗಿರುತ್ತಾಳೆ‌. ಇವಳು ಮರ್ಕಂಜ ಗ್ರಾಮದ ಮೋಹನ ಹೊಸೋಳಿಕೆ ಹಾಗೂ ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೋಳಿಕೆ ದಂಪತಿಗಳ ಪುತ್ರಿ.ಇವಳು ಮರ್ಕಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸರಬೈಲುನಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜ್ಞಾನದೀಪ ನವೋದಯ ತರಬೇತಿ ಕೇಂದ್ರ ಸುಳ್ಯದಲ್ಲಿ ತರಬೇತಿ ಪಡೆದಿರುತ್ತಾಳೆ.

ಬೆಳ್ಳಾರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಾರಂಪರಿಕ ವಸ್ತುಗಳ ಪ್ರದರ್ಶನ ; “ಸ್ವ-ಉದ್ಯೋಗದಿಂದ ಮಹಿಳೆಯರ ಬದುಕು ಸದೃಢ” : ಭಾರತಿ ಕೆ.ಪಿ

“ಸ್ವ-ಉದ್ಯೋಗವು ಮಹಿಳೆಯರ ಬದುಕನ್ನು ಸದೃಢಗೊಳಿಸುತ್ತದೆ ಮತ್ತು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕು ಸಾಗಿಸಬೇಕು” ಎಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಭಾರತಿ ಕೆ.ಸಿ ಹೇಳಿದರು. ಅವರು 21 ಮಾರ್ಚ್ 2026 ರಂದು ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ಬೆಳ್ಳಾರೆಯ ಜ್ಞಾನನದೀಪ ಶಿಕ್ಷಣ...

ಎಣ್ಮೂರು ಸರಕಾರಿ ಪ್ರೌಢಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ

ಶಿಸ್ತು, ಸಹಕಾರ ಮತ್ತು ಸೇವಾ ಮನೋಭಾವವನ್ನು ಎಳವೆಯಲ್ಲೇ ಮಕ್ಕಳಲ್ಲಿ ಬೆಳೆಸಲು ಪೂರಕವಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಒಂದು ದಿನದ ಶ್ರಮದಾನವನ್ನು ಇತಿಹಾಸ ಪ್ರಸಿದ್ಧವಾದ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ನಡೆಸಿದರು. ಎಣ್ಮೂರು ಸರಕಾರಿ ಶಾಲೆಯ ಸುಮಾರು 21 ಸ್ಕೌಟ್ಸ್ ಮತ್ತು 26 ಗೈಡ್ಸ್ ಗಳು ಶ್ರಮದಾನದಲ್ಲಿ ಭಾಗವಹಿಸಿದರು. ಸ್ಕೌಟ್ಸ್ ಶಿಕ್ಷಕರಾದ...

ದ್ವಾದಶ ರಾಶಿಗಳ ದಿನ ಭವಿಷ್ಯ

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 22-03-2026 ಭಾನುವಾರ01,🐏ಮೇಷರಾಶಿ🐏📃,ಮಾನಸಿಕ ನೆಮ್ಮದಿಗಾಗಿ ದೈವಿಕ ಕಾರ್ಯಕ್ರಮಗಳು ನಿರ್ವಹಿಸುತ್ತೀರಿ. ಸಮರ್ಥನೀಯವಲ್ಲದ ಆಲೋಚನೆಗಳಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಸಹಾಯ ಮಾಡಿದ ಆಪ್ತ ಸ್ನೇಹಿತರಿಂದ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರಗಳು ಸುಗಮವಾಗಿ ಸಾಗದೆ ಅತೃಪ್ತಿ ಉಂಟಾಗುತ್ತದೆ,ಗಮನಿಸಿ:-ವೃತ್ತಿ ಮತ್ತು ಉದ್ಯೋಗಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತವೆ,ಪರಿಹಾರ:-ಶ್ರೀಕಾಳಿಕಾದೇವಿಯನ್ನು ಸ್ಮರಣೆ ಮಾಡಿ,02,🐂ವೃಷಭರಾಶಿ🐂📃,ಕೌಟುಂಬಿಕ ವಾತಾವರಣ ಊಟಸಾಗದಿಂದ ಕೂಡಿರುತ್ತದೆ....
Loading posts...

All posts loaded

No more posts

error: Content is protected !!