Ad Widget

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಯೋಜನಾ ಕಾರ್ಯ ಬರವಣಿಗೆ ಕಾರ್ಯಗಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದಲ್ಲಿ ಮಾ.04ರಂದು ಸಂಶೋಧನಾ ಸಮಿತಿಯು ಯೋಜನಾ ಕಾರ್ಯದ ಬರವಣಿಗೆಯ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಂಡಿತು. ಇದರ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಎಸ್ ಅವರು ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ಯೋಜನಾ ಕಾರ್ಯದ ಬರವಣಿಗೆಯ ರೂಪುರೇಷೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಲತಾ ಬಿ.ಟಿ ಮತ್ತು ಸಂಶೋಧನಾ ಸಮಿತಿಯ ಸಂಯೋಜಕಿ ಶ್ರೀಮತಿ ಆರತಿ.ಕೆ ಉಪಸ್ಥಿತರಿದ್ದರು. ನಿಶಾ ಗೌರಿ ನಿರೂಪಿಸಿದರು. ಸಂಶೋಧನಾ ಸಮಿತಿಯ ಸದಸ್ಯೆ ಶ್ರೀಮತಿ ಸುಮಿತ್ರ ಸ್ವಾಗತಿಸಿ, ಸಮಿತಿಯ ವಿದ್ಯಾರ್ಥಿ ನಾಯಕಿ ವಿಂಧ್ಯ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading