ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಬಗ್ಗೆ ಕೇಂದ್ರ ಸರಕಾರ ಇದೀಗ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ.
ಅನ್ ಲಾಕ್ 3.0 ನಿಯಮಗಳು ಅಗಸ್ಟ್ 1 ರಿಂದ ಜಾರಿಯಾಗಲಿದೆ. ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ರದ್ದು ಮಾಡಲಾಗಿದೆ. ಆ.31 ರವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ. ಆಗಸ್ಟ್ 5 ರಿಂದ ಯೋಗ, ಜಿಮ್, ಸ್ವಿಮ್ಮಿಂಗ್ ಪೂಲ್ ನಡೆಸಲು ಅವಕಾಶ ನೀಡಲಾಗುತ್ತಿದೆ.
ಕಂಟೈನ್ಮೆಂಟ್ ಪ್ರದೇಶದಲ್ಲಿ ಅಗಸ್ಟ್ 31 ರವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು, ಮೂಲಭೂತ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 65 ವರ್ಷ ಮೇಲ್ಪಟ್ಟ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ಅವಶ್ಯಕ ಕೆಲಸಗಳಿಗೆ ಮಾತ್ರ ಹೊರಗೆ ಹೋಗಬೇಕು.
ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸೂಚಿಸಿದ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಆರೋಗ್ಯ ಸೇತು ಬಳಕೆ ಮುಂದುವರಿಸುವಂತೆ ಹೊಸ ಮಾರ್ಗ ಸೂಚಿಯಲ್ಲೂ ತಿಳಿಸಲಾಗಿದೆ.