ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 ಚೀನೀ ಅಪ್ಲಿಕೇಶನ್‌ಗಳು, ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಗಾಗಿ ಸರ್ಕಾರದ ರೇಡಾರ್‌ನಲ್ಲಿವೆ.
ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮಾಡ್ತಿರುವ ಆರೋಪದ ಮೇಲೆ 275 ಆ್ಯಪ್ ಗಳ ಪಟ್ಟಿಯನ್ನು ಪರಿಶೀಲನೆಗಾಗಿ ಸರ್ಕಾರ ರಚಿಸಿದೆ. ಉಲ್ಲಂಘನೆ ಕಂಡುಬಂದಲ್ಲಿ ಆ್ಯಪ್ ಗಳನ್ನು ನಿಷೇಧಿಸುವ ಸಾಧ್ಯತೆಯಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಕಳೆದ ತಿಂಗಳು ಟಿಕ್‌ಟಾಕ್ ಮತ್ತು ವೀಚಾಟ್ ಸೇರಿದಂತೆ 59 ಚೀನೀ ಆಯಪ್‌ಗಳನ್ನು ಸರ್ಕಾರ ನಿಷೇಧಿಸಿತ್ತು. ಕೇವಲ ಚೈನೀಸ್ ಮಾತ್ರವಲ್ಲದೆ ಚೀನಾದಿಂದಲೂ ಹೂಡಿಕೆಗಳನ್ನು ಹೊಂದಿರುವ ಅಪ್ಲಿಕೇಶನ್‌ಗಳನ್ನು ಸಹ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಮೊಬೈಲ್ ಗೇಮಿಂಗ್ ಸೆನ್ಸೇಷನ್ ಪಬ್ಜಿ ಟೆನ್ಸೆಂಟ್ ಬೆಂಬಲಿತ ಪಬ್ಜಿ, ಶಿಯೋಮಿಯಿಂದ ಜಿಲಿ ಮತ್ತು ಅಲಿಬಾಬಾ ಸಮೂಹದ ಶಾಪಿಂಗ್ ಪೋರ್ಟಲ್ ಅಲಿಎಕ್ಸ್ಪ್ರೆಸ್ ಮುಂತಾದ ಪ್ರಮುಖ ಅಪ್ಲಿಕೇಶನ್‌ಗಳನ್ನು ಒಳಗೊಂಡ ಸುಮಾರ 275 ಅಪ್ಲಿಕೇಶನ್‌ಗಳ ಹೊಸ ಪಟ್ಟಿ ಸಿದ್ಧವಾಗಿದೆ. ಇದು ಶೀಘ್ರವೇ ರದ್ದಾಗುವ ಸಾಧ್ಯತೆಯಿದೆ.
- Sunday
- November 24th, 2024