ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಕೃಷ್ಣ ಪ್ರಸಾದ್ ದೋಳ ದ.ಕ. ಜಿಲ್ಲಾ ನೋಟರಿಯಾಗಿ ಕೇಂದ್ರ ಸರಕಾರದಿಂದ ನೇಮಕಗೊಂಡಿದ್ದಾರೆ.
ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ದೋಳ ಮನೆಯ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ತಂಗಮ್ಮ ಡಿ.ಬಿ.ಯವರ ಪುತ್ರ. ಇವರ ಪತ್ನಿ ಶ್ರೀಮತಿ ಸೌಮ್ಯ ಪಿ.ಎನ್. ಸುಳ್ಯದಲ್ಲಿ ಉಪವಲಯಾ ರಣ್ಯಾಧಿಕಾರಿಯಾಗಿದ್ದಾರೆ.
ಕೃಷ್ಣ ಪ್ರಸಾದರು ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಹಾಗೂ ಸುಳ್ಯ ಕೆ.ವಿ.ಜಿ
ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ನಂತರ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಮಂಗಳೂರಿನ ಹಿರಿಯ ನ್ಯಾಯವಾದಿ ವೈ.ಪಿ.ಕರ್ಕೆರ ಇವರ ಬಳಿ ಕಿರಿಯ ವಕೀಲರಾಗಿ 8 ವರ್ಷಗಳ ಕಾಲ ಇದ್ದರು. ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ತಾಲೂಕು ಕಚೇರಿ ಎದುರು ಕುರುಂಜಿಭಾಗ್ ನಲ್ಲಿರುವ ಕೆ.ಪಿ. ಶೆಣೈ ಕಾಂಪ್ಲೆಕ್ಸ್ ನಲ್ಲಿ ಸ್ವಂತ ಕಚೇರಿ ಹೊಂದಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. 2004 ರಲ್ಲಿ ಎನ್ ಎಸ್ ಯು ಐ ನಗರ ಅಧ್ಯಕ್ಷರಾಗಿ,ಜಿಲ್ಲಾ ಕಾರ್ಯದರ್ಶಿಯಾಗಿ,
2005- 06 ರಲ್ಲಿ ಕೆವಿಜಿ ಕಾನೂನು ಕಾಲೇಜಿನ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಹಾಗೂ ಆಲ್ ಕಾಲೇಜು ಯೂನಿಯನ್ ಕಾರ್ಯದರ್ಶಿ ಯಾಗಿ ಗುರುತಿಸಿಕೊಂಡಿದ್ದಾರೆ.