ಭಾನುವಾರದ ಲಾಕ್ ಡೌನ್ ಜಾರಿಯಲ್ಲಿದ್ದು ಸುಳ್ಯ ವಿಖಾಯ ತಂಡವು ಸಂಪಾಜೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಹದಿಮೂರು ಪ್ರಯಾಣಿಕ ಬಸ್ ತಂಗುದಾಣ ಹಾಗೂ ಪರಿಸರ ಶುಚಿಗೊಳಿಸಿ,ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಿ ಭಾನುವಾರದ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಅಧ್ಯಕ್ಷರಾದ ಜಿ, ಕೆ,ಹಮೀದ್ ರವರ ನೇತೃತ್ವದಲ್ಲಿ ತಾಜ್ ಮಹಮ್ಮದ್ ಸಂಪಾಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪಾಜೆ ಗ್ರಾಮ ವ್ಯಾಪ್ತಿಯ ಸಂಪಾಜೆಯಿಂದ ಗೂನಡ್ಕದ ವರೆಗಿನ ಸುಮಾರು ಹದಿಮೂರು ಬಸ್ ನಿಲ್ದಾಣಗಳನ್ನು ತೊಳೆದು ಪರಿಸರ ಶುಚಿಗೊಳಿಸಿ ಸ್ಯಾನಿಟೈಸರ್ ಸಿಂಪಡಿಸಲಾಯಿತು, ಹಾಗೂ ಸಂಪಾಜೆ ಪಂಚಾಯತ್ ಕಟ್ಟಡ ಸೇರಿದಂತೆ ಕಲ್ಲುಗುಂಡಿ ಪೇಟೆಯ ಪರಿಸರ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್,ಆಲಿ,ಹಾಜಿ,ಕೆ ಎಂ ಅಶ್ರಫ್,ಕಾನಕ್ಕೊಡ್ ಮಹಮ್ಮದ್, ಸೂಪರ್ ರಝಾಕ್, ಎಸ್ ಕೆ ಹನೀಫ್ ಸಂಪಾಜೆ,ಸುಳ್ಯ ವಿಖಾಯ ತಂಡದ ಚೇರ್ಮೆನ್ ಷರೀಫ್ ಅಜ್ಜಾವರ, ಕನ್ವೀನರ್ ಖಲಂದರ್ ಎಲಿಮಲೆ,ಮಹಮ್ಮದ್ ಮೇನಾಲ,ಮುನೀರ್ ದಾರಿಮಿ ಗೂನಡ್ಕ, ಇರ್ಫಾನ್ ಪೇರಡ್ಕ ಹಾಗೂ ಸಂಪಾಜೆ ಪಂಚಾಯತ್ ಸ್ವಚ್ಛತಾ ದೂತ ಬೋಜ ಕಡೆಪಾಲ ಸೇರಿದಂತೆ ಅಜ್ಜಾವರ,ಮೇನಾಲ,ಎಲಿಮಲೆ, ಗೂನಡ್ಕದ ಸುಮಾರು ಮೂವತ್ತು ಜನ ವಿಖಾಯ ಕಾರ್ಯಕರ್ತರು ಬಾಗವಹಿಸಿದ್ದರು.
ಸುಳ್ಯ SKSSF ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದರು.