ಬರೆಯಲು ಹೊರಟೆ ನಾನೊಂದು ಕವನ
ಈಗ ನೆನಪಾಗೋದೊಂದೆ ಏನು ಹೇಳಿ ? ….ಕೊರೊನ
ಎಲ್ಲರ ಮನದಲಿ ಮೂಡಿಹುದು ತಲ್ಲಣ
ನೀವೇ ಹೇಳಿ ನಾವೇನು ಮಾಡೋಣ ?
ಅರಸಿ ಹೋದರೆಷ್ಟೋ ಮಂದಿ ಐಷಾರಾಮಿ ಜೀವನ
ತಾಯ್ನಾಡ ತೊರೆದು ಹತ್ತಿದರು ವಿಮಾನ
ಹಗಲಿರುಳು ದುಡಿದು ಕೂಡಿಟ್ಟರೂ ಹಣ
ತೀರಿಸಲಾದೀತೇ ನಿನ್ನ ತಾಯಿಯ ಋಣ
ಎಷ್ಟು ತೆಗಳಿದರೇನು ಫಲ ಈ ಮಹಾಮಾರಿನ
ಮಾನವನ ಅತಿ ದುರಾಸೆಯಲ್ಲವೇ ಇಷ್ಟಕ್ಕೆಲ್ಲಾ ಕಾರಣ
ಇನ್ನಾದರೂ ಪರಿಸ್ಥಿತಿ ಅರಿತು ಬಾಳೋಣ
ಹಳ್ಳಿಯ ಜೀವನವೇ ಲೇಸೆನ್ನೋಣ
✒️ ಅಖಿಲಾ ಕಂಟ್ರಮಜಲು
ಉಪನ್ಯಾಸಕಿ, ಎಫ್.ಎಮ್.ಸಿ. ಕಾಲೇಜು ಮಡಿಕೇರಿ