
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಪ್ಪೇರ್ಯ ಗ್ರಾಮದ ಉಮೇಶ್ ಇವರು
(47 ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ಮೃತರು ತಾಯಿ ಕಮಲ,ಪತ್ನಿ ತೀರ್ಥಕುಮಾರಿ,ಓರ್ವ ಪುತ್ರ,ಓರ್ವ ಪುತ್ರಿ,ಐವರು ಸಹೋದರರು,ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.